ಇತ್ತೀಚೆಗೆ ಬಿಡುಗಡೆಯಾದ ಮ್ಯೂಸಿಕ್ ವೀಡಿಯೋ ‘ಮೇ ಚಲಾ’ದಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಂಡಿರುವ ಪ್ರಗ್ಯಾ ಜೈಸ್ವಾಲ್ ಅವರು ಚಿತ್ರೀಕರಣದ ಮೊದಲ ದಿನ ಸಲ್ಮಾನ್ ಖಾನ್ ಅವರನ್ನು ಭೇಟಿಯಾದಾಗ, ಅವರನ್ನು ಸ್ಪರ್ಶಿಸಲು ಅನುಮತಿ ಕೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಕೋಪಗೊಳ್ಳುತ್ತಾರೆ ಎಂಬ ಭಯ ಇತ್ತು ಹಾಗಾಗಿ, ನಿಮ್ಮನ್ನು ಮುಟ್ಟಬಹುದಾ ಎಂದು ಅನುಮತಿ ಕೇಳಿದ್ದೆ ಎಂದಿದ್ದಾರೆ ಪ್ರಗ್ಯಾ. ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರು ರಂಧವಾ ಮತ್ತು ಯುಲಿಯಾ ವಂಟೂರ್​ ಅವರು ಜೊತೆಯಾಗಿ ‘ಮೇ ಚಾಲಾ’ ಹಾಡು ತಯಾರಿಸಿದ್ದಾರೆ. ಹಾಡಿನಲ್ಲಿ ಸಲ್ಮಾನ್ ಮತ್ತು ಪ್ರಗ್ಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶನಿವಾರ ಈ ಹಾಡು ಬಿಡುಗಡೆಯಾಗಿದೆ. “ಮೊದಲ ದಿನ ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಆದಾಗ ನಾನು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ಅರಿವು ನನಗೆ ಇರಲಿಲ್ಲ. ಸಲ್ಮಾನ್​ ಖಾನ್​ ಅವರಂಥ ದೊಡ್ಡ ಸ್ಟಾರ್​ ನಟನನ್ನು ಭೇಟಿಯಾದಾಗ ಅವರಿಗೆ ಕಿರಿಕಿರಿ ಆಗುವಂತೆ ನಾವು ನಡೆದುಕೊಳ್ಳಬಾರದು. ಅಪ್ಪಿತಪ್ಪಿಯೂ ಕೂಡ ಅವರಿಗೆ ಕೋಪ ಬರುವಂತೆ ನಾವು ವರ್ತಿಸಬಾರದು. ಹಾಗಾಗಿ ನಾನು ಹೆಚ್ಚಿನ ಎಚ್ಚರಿಕೆಯಿಂದ ನಡೆದುಕೊಂಡೆ. ನಿಮ್ಮನ್ನು ನಾನು ಮುಟ್ಟಬಹುದೇ ಅಂತ ಮೊದಲ ಬಾರಿಗೆ ಅನುಮತಿ ಕೇಳಿದೆ” ಎಂದು ಪ್ರಗ್ಯಾ ಜೈಸ್ವಾಲ್​ ಹೇಳಿದ್ದಾರೆ.