ನಾಳೆ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಸಜ್ಜು..! - BC Suddi
ನಾಳೆ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಸಜ್ಜು..!

ನಾಳೆ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಸಜ್ಜು..!

ಬೆಂಗಳೂರು : ಉಪಚುನಾವಣೆ ಬಳಿಕ ಸಂಬಳ ಹೆಚ್ಚಳ ಮಾಡಲಾಗುವುದು. ಹೀಗಾಗಿ ಏಪ್ರಿಲ್ 7 ರ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿ ಮಾಡದಿದ್ದರೆ ಏಪ್ರಿಲ್ 7 ರಿಂದ ಮುಷ್ಕರ ಖಚಿತ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 6 ರೊಳಗೆ ಆರನೇ ವೇತನ ಆಯೋಗ ಜಾರಿ ಮಾಡದಿದ್ದರೆ ಏಪ್ರಿಲ್ 7 ರಿಂದ ಮುಷ್ಕರ ನಡೆಸಲಾಗುವುದು ಎಂದು ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ .
ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನಾ ಸಪ್ತಾಹ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಿಸಬೇಕೆಂದು ನೌಕರರು ಆಗ್ರಹಿಸುತ್ತಿದ್ದು, ಏಪ್ರಿಲ್ 6 ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. ಆರನೇ ವೇತನ ಆಯೋಗ ಜಾರಿಯಾಗದಿದ್ದರೆ ಏಪ್ರಿಲ್ 7 ರಂದು ಮುಷ್ಕರ ಮಾಡುವುದಾಗಿ ಸಾರಿಗೆ ನೌಕರರು ಕರೆ ಕೊಟ್ಟಿದ್ದಾರೆ.

error: Content is protected !!