ನಾಳೆ ಸಾರಿಗೆ ನೌಕರರಿಂದ ವಿಶೇಷ ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್ - BC Suddi
ನಾಳೆ ಸಾರಿಗೆ ನೌಕರರಿಂದ ವಿಶೇಷ ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್

ನಾಳೆ ಸಾರಿಗೆ ನೌಕರರಿಂದ ವಿಶೇಷ ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್

 

ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್‌ ಅವರು ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ‘6ನೇ ಆಯೋಗದ ಜಾರಿಗಾಗಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ. ಆದ್ರೆ, ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡಲಿದ್ದೇವೆ. ಸಂಜೆ 6ರಿಂದ 7 ಗಂಟೆಯವರೆಗೆ ಮೊಂಬತ್ತಿ ಬೆಳಗಿಸಿ ವಿಶೇಷ ಚಳುವಳಿ ಮಾಡುತ್ತೇವೆ’ ಎಂದರು.