ನಾಳೆಯಿಂದ ಆರಂಭವಾಗ ಬೇಕಿದ್ದ ಕ.ವಿವಿ. ಪರೀಕ್ಷೆಗಳು ಮುಂದಕ್ಕೆ - BC Suddi
ನಾಳೆಯಿಂದ ಆರಂಭವಾಗ ಬೇಕಿದ್ದ ಕ.ವಿವಿ. ಪರೀಕ್ಷೆಗಳು ಮುಂದಕ್ಕೆ

ನಾಳೆಯಿಂದ ಆರಂಭವಾಗ ಬೇಕಿದ್ದ ಕ.ವಿವಿ. ಪರೀಕ್ಷೆಗಳು ಮುಂದಕ್ಕೆ

ಧಾರವಾಡ: ಏಪ್ರಿಲ್ 15, 16 ಹಾಗೂ 17ರಂದು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ನಡೆಯಬೇಕಿದ್ದವು. ಆದರೆ ಸಾರಿಗೆ ಮುಷ್ಕರದಿಂದಾಗಿ ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆಯುವು ಕಷ್ಟಕರವಾಗಿದೆ ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ವಿವಿ ಕುಲಪತಿ ಕೆ.ಬಿ.ಗುಡಸಿ ತಿಳಿಸಿದ್ದಾರೆ.

ನಾಳೆಯಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಪರಿಸ್ಥಿತಿ ನೋಡಿಕೊಂಡು ಪ್ರಕಟಿಸುವುದಾಗಿ ವಿವಿ ಕುಲಪತಿ ಹೇಳಿದ್ದಾರೆ.