ರಾಜಸ್ಥಾನ: ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಮಂಗಳಿಯವಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ವರು ಮಕ್ಕಳು‌ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದಿಂದ ಮತಿಯಾ (32) ಎಂಬ ಮಹಿಳೆ‌ ನಿನ್ನೆ ರಾತ್ರಿ ತನ್ನ ಮಕ್ಕಳಾದ ಕೋಮಲ್ (4), ರಿಂಕು (3), ರಾಜ್ ವೀರ್ (22 ತಿಂಗಳು) ಮತ್ತು ದೇವ ರಾಜ್ (ಒಂದು ತಿಂಗಳು)ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ಆಕೆಯೂ ಬಾವಿಗೆ ಹಾರಿದ್ದಾಳೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಬಾವಿಯಿಂದ ಎಲ್ಲರನ್ನು ಹೊರತರಲು ಯತ್ನಿಸಿದರು. ಆದರೆ ದುರಾದೃಷ್ಟವಶಾತ್‌ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ‌.