ನವೋದಯ ವಿದ್ಯಾಲಯ ಸಮಿತಿಯು ವಿವಿಧ 1,925 ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಫೆಬ್ರುವರಿ 10 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
* ಅಸಿಸ್ಟಂಟ್‌ ಕಮಿಷನರ್: 05 ಹುದ್ದೆಗಳು, ವಿದ್ಯಾರ್ಹತೆ: ಎಂಎ ಇನ್ ಹ್ಯುಮ್ಯಾನಿಟೀಸ್, ಸೈನ್ಸ್‌, ಕಾಮರ್ಸ್‌.
* ಅಸಿಸ್ಟಂಟ್ ಕಮಿಷನರ್ (ಅಡ್ಮಿನ್) (ಗ್ರೂಪ್‌ ಎ): 02 ಹುದ್ದೆಗಳು, ವಿದ್ಯಾರ್ಹತೆ: ಪದವಿ
* ಮಹಿಳಾ ಸ್ಟಾಫ್‌ ನರ್ಸ್‌: 82 ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ ಮತ್ತು ಬಿಎಸ್ಸಿ ನರ್ಸಿಂಗ್
* ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಗ್ರೂಪ್‌ ಸಿ): 10 ಹುದ್ದೆಗಳು, ವಿದ್ಯಾರ್ಹತೆ: ಪದವಿ ಮತ್ತು ಕಂಪ್ಯೂಟರ್ ಅರಿವು
* ಆಡಿಟ್ ಅಸಿಸ್ಟಂಟ್ (ಗ್ರೂಪ್‌ ಸಿ): 11 ಹುದ್ದೆಗಳು, ವಿದ್ಯಾರ್ಹತೆ: ಬಿ.ಕಾಂ
* ಜೂನಿಯರ್ ಟ್ರಾನ್ಸ್‌ಲೇಷನ್‌ ಆಫೀಸರ್: 04 ಹುದ್ದೆಗಳು, ವಿದ್ಯಾರ್ಹತೆ: ಡಿಪ್ಲೊಮ / ಪಿಜಿ
* ಜೂನಿಯರ್ ಇಂಜಿನಿಯರ್ (ಸಿವಿಲ್): 01 ಹುದ್ದೆಗಳು, ವಿದ್ಯಾರ್ಹತೆ: ಬಿಇ ಸಿವಿಲ್
* ಸ್ಟೆನೋಗ್ರಾಫರ್ (ಗ್ರೂಪ್‌ ಸಿ): 22 ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ ಜತೆಗೆ, ಶೀಘ್ರಲಿಪಿ ಪ್ರಮಾಣ ಪತ್ರ
* ಕಂಪ್ಯೂಟರ್ ಆಪರೇಟರ್ (ಗ್ರೂಪ್‌ ಸಿ): 04 ಹುದ್ದೆಗಳು, ವಿದ್ಯಾರ್ಹತೆ: ಡಿಗ್ರಿ, ಒಂದು ವರ್ಷ ಡಿಪ್ಲೊಮ
* ಕ್ಯಾಟರಿಂಗ್ ಅಸಿಸ್ಟಂಟ್ ( ಗ್ರೂಪ್‌ ಸಿ): 87 ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ, ಡಿಪ್ಲೊಮ
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಗ್ರೂಪ್‌ ಸಿ): 630 ಹುದ್ದೆಗಳು, ವಿದ್ಯಾರ್ಹತೆ: ಸೀನಿಯರ್ ಸೆಕೆಂಡರಿ ಟೈಪ್‌ರೈಟಿಂಗ್ ಜ್ಞಾನ
* ಇಲೆಕ್ಟ್ರೀಷಿಯನ್ ಕಮ್‌ ಪ್ಲಂಬರ್ (ಗ್ರೂಪ್‌ ಸಿ): 273 ಹುದ್ದೆಗಳು, ವಿದ್ಯಾರ್ಹತೆ: 10th, ITI (ಇಲೆಕ್ಟ್ರೀಷಿಯನ್, ವೈಯರ್‌ಮೆನ್‌, ಪ್ಲಂಬಿಂಗ್ )
* ಲ್ಯಾಬ್ ಅಟೆಂಡಂಟ್ (ಗ್ರೂಪ್‌ ಸಿ): 142 ಹುದ್ದೆಗಳು, ವಿದ್ಯಾರ್ಹತೆ: 10th, 12th ಸೈನ್ಸ್‌, ಡಿಪ್ಲೊಮ ಲ್ಯಾಬ್ ಟೆಕ್ನೀಷಿಯನ್
* ಮೆಸ್‌ ಹೆಲ್ಪರ್ (ಗ್ರೂಪ್‌ ಸಿ): 629 ಹುದ್ದೆಗಳು, ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
* ಮಲ್ಟಿ ಟಾಸ್ಕಿಂಗ್ ಸ್ಟಾಫ್(ಗ್ರೂಪ್‌ ಸಿ) 23 ಹುದ್ದೆಗಳು, ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ವಿಳಾಸ : https://cdn.digialm.com//EForms/configuredHtml/1258/74494//Instruction.html

ನವೋದಯ ವಿದ್ಯಾಲಯ ಸಮಿತಿ ವೆಬ್‌ ವಿಳಾಸ : https://navodaya.gov.in/nvs/en/Home1