ಢಾಕಾ: ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ತಾರಕ್ಕೇರಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಹಿಂದೂಗಳ ಪೂಜಾ ಸ್ಥಳ, ಹಿಂದೂ ಕುಟುಂಬಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ದುರ್ಗಾ ಪೂಜೆ ವೇಳೆ ನಡೆದ ಮಂದಿರದ ಮೇಲಿನ ದಾಳಿ ಹಾಗೂ ಹತ್ಯೆ ಬೆನ್ನಲ್ಲೇ ಇದೀಗ 29 ಹಿಂದೂ ಕುಟುಂಬಗಳ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ.

ದುರ್ಗಾ ಪೂಜೆ ವೇಳೆ ಮಂದಿರದ ಹಾಗೂ ಹಿಂದೂ ಕುಟುಂಬದ ಮೇಲೆ ದಾಳಿ ವಿರೋಧಿಸಿ ಅಲ್ಪ ಸಂಖ್ಯಾತ ಸಮುದಾಯ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ವೇಳೆ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ದುರ್ಷರ್ಮಿಗಳ ತಂಡ ಪ್ರತಿಭಟನೆ ನಡೆಸಿದ ಹಿಂದೂ ಕುಟುಂಬದ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ

ಢಾಕಾದಿಂದ 255 ಕಿ.ಮೀ ದೂರದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. 29 ಮನೆಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಈ ಹಳ್ಳಿಯ ಯುವಕ ಧರ್ಮ ನಿಂದನೆ ಮಾಡಿದ್ದಾನೆ ಅನ್ನೋವ ವದಂತಿ ಹಬ್ಬಿತ್ತು. ಇದರಿಂದ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮನೆ ಮೇಲೆ ದಾಳಿ ಮಾಡುತ್ತಿದ್ದಂತೆ ಮನೆಯಲ್ಲಿದ್ದವರೂ ಓಡಿ ಹೋಗಿದ್ದಾರೆ. ಹೀಗಾಗಿ ಯಾವುದೇ ಪ್ರಾಣ ಹಾನಿ ಘಟನೆ ವರದಿಯಾಗಿಲ್ಲ. ಸದ್ಯ ಘಟನಾ ಸ್ಥಳವನ್ನು ಪೊಲೀಸರು ಸುತ್ತುವರೆದಿದ್ದು, ತನಿಖೆ ನಡೆಯುತ್ತಿದೆ.

ರಂಜಿತ್ ಸಿಂಗ್ ಹತ್ಯೆ ಕೇಸ್: ಡೇರಾ ಸಚ್ಚಾ ಸೌದಾದ ಗುರ್ಮೀತ್ ರಾಮ್ ರಹೀಮ್, ಇತರ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ

ದುರ್ಗಾ ಪೂಜೆ ವೇಳೆ ನಡೆದ ದಾಳಿಯಲ್ಲಿ ನಾಲ್ವರು ಹಿಂದೂಗಳು ಹತ್ಯೆಯಾಗಿದ್ದಾರೆ. ಈ ಘಟನೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಮಂದಿರ ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ಭಾರತ ಖಂಡಿಸಿತ್ತು. ಅದರಲ್ಲೂ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮತ್ತೆ ಹಿಂದೂಗಳ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಇದೀಗ ಬಾಂಗ್ಲಾದೇಶದಲ್ಲಿರುವ ಅಲ್ಪ ಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ದುರ್ಗೂ ಪೂಜೆ ವೇಳೆ ದೇವಸ್ಥಾನದ ಮೇಲೆ ದಾಳಿ ಮಾಡಿದ ದುರ್ಷರ್ಮಿಗಳು, ಮೂರ್ತಿಗಳನ್ನು ಧ್ವಂಸಗೊಳಿಸಿದ್ದರು. ಅಡ್ಡಿಪಡಿಸಿದ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಲಾಗಿತ್ತು. ಹಿಂದೂ ದೇವಸ್ಥಾನದಲ್ಲಿ  ಖುರಾನ್ ಪ್ರತಿ ಇಡಲಾಗಿತ್ತು. ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಕೋಮು ಗಲಭೆ ತಾರಕಕ್ಕೇರಿದೆ. ಹಿಂದೂ ಮಂದಿರ ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ಬಾಂಗ್ಲಾ ಸರ್ಕಾರ ಖಂಡಿಸಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.