ಬೆಂಗಳೂರು: ಯುವರತ್ನ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಯೊಬ್ಬ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ.

ಅಪ್ಪು ಅಗಲಿ ವಾರಗಳು ಕಳೆಯುತ್ತಿವೆ. ಆದರೂ ಸಹ ಅವರನ್ನು ಮರೆಯುವುದು ಅಭಿಮಾನಿಗಳಿಗೆ ಆಗುತ್ತಿಲ್ಲ. ಇನ್ನು ಅವರು ಬದುಕಿದ್ದಾರೆ ಎಂದು ಎಷ್ಟೋ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಅದರಂತೆ ಅಪ್ಪು ಇಲ್ಲ ಎಂಬುದನ್ನು ಒಪ್ಪದ ಇಲ್ಲೊಬ್ಬ ಅಭಿಮಾನಿ ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಅಪ್ಪು ಭಾವಚಿತ್ರದೊಂದಿಗೆ ಹತ್ತಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ.

‘ಯುಎಇ ಟಿ20 ಲೀಗ್’ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಪುನೀತ್ ರಾಜ್‍ಕುಮಾರ್ ಅನೇಕ ವರ್ಷಗಳಿಂದ ಶಬರಿಮಲೆಗೆ ಹೋಗಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಬಾಲ್ಯದಿಂದಲೂ ತಂದೆ ಡಾ.ರಾಜ್‍ಕುಮಾರ್ ಜೊತೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದ ಇವರು ಅಣ್ಣಾವ್ರು ಅಗಲಿದ ಬಳಿಕ ಅಣ್ಣ ಶಿವರಾಜ್ ಕುಮಾರ್ ಅವರ ಜೊತೆ ಶಬರಿಮಲೆಗೆ ಹೋಗುತ್ತಿದ್ದರು.

ಅಪ್ಪು ಅಗಲಿದಾಗಿನಿಂದ ಅವರ ಹೆಸರಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅಪ್ಪು ಜನರಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಅದು ಅಲ್ಲದೇ ಅಪ್ಪು ಅಗಲಿಕೆ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡ ಸಿನಿಮಾ ಲೋಕಕ್ಕೂ ದೊಡ್ಡಪೆಟ್ಟು ಬಿದ್ದಿದೆ.