ನವದೆಹಲಿ: ದೇಶದ ಪ್ರಗತಿ ಆಗಲೇಬೇಕು ಅಂದ್ರೆ ರಫ್ತು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವೋಕಲ್ ಫಾರ್ ಲೋಕಲ್ ಕಾರ್ಯಕ್ರಮಗಳು ರಫ್ತಿನ ಪ್ರಮಾಣವನ್ನ ವೇಗಗೊಳಿಸುತ್ತವೆ ಅಂತಲೂ ಮೋದಿ ತಿಳಿಸಿದ್ದಾರೆ.

ನವದೆಹಲಿ ವಾಣಿಜ್ಯ ಸಚಿವಾಲಯದ ನೂತನ ಭವನವನ್ನ ಉದ್ಘಾಟಿಸಿ ಮೋದಿ ಮಾತನಾಡಿದರು.

ಕಳೆದ ವರ್ಷ ಜಾಗತಿಕವಾಗಿ ಅಡತೆಡೆಗಳಿದ್ದವು. ಆದಾಗ್ಯೂ ಭಾರತ ದೇಶ 50 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನ ರಫ್ತು ಮಾಡಿದೆ ಅಂತಲೂ ಮೋದಿ ವಿವರಿಸಿದ್ದಾರೆ.