ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದ ಎರಡನೇ ಮಹಡಿಯಲ್ಲಿರುವ ನ್ಯಾಯಾಧೀಶರ ಕೊಠಡಿಯ ಬಳಿ ಬುಧವಾರ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಯಿತು. ಆದರೆ ಘಟನೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ.

ಕೊಠಡಿ ಸಂಖ್ಯೆ 210 ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗಿನ ವೇಳೆಗೆ ಘಟನೆ ಸಂಭವಿಸಿದೆ. ಹವಾನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.

ಪ್ರತಿ ಜಿಲ್ಲಾ ನ್ಯಾಯಾಲಯಗಳಲ್ಲಿಯೂ ನಿರ್ವಹಣಾ ಸಮಿತಿಗಳಿವೆ. ನ್ಯಾಯಾಲಯದ ಉಪಕರಣಗಳನ್ನು ಆಗಾಗ ಪರಿಶೀಲಿಸುವ ಜವಾಬ್ದಾರಿಯನ್ನು ಅಗ್ನಿಶಾಮಕ ಇಲಾಖೆ ಹೊಂದಿದೆ. ಆದರೆ ಇದನ್ನು ಮಾಡಲಾಗುತ್ತಿಲ್ಲ ಎಂದು ವಕೀಲರ ಸಂಘದ ಕಾರ್ಯದರ್ಶಿ, ನ್ಯಾಯವಾದಿ ವಿನೀತ್ ಜಿಂದಾಲ್ ಹೇಳಿದ್ದಾರೆ.