ಬೆಂಗಳೂರು: ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಮನೆ ಮಂದಿಯೆಲ್ಲ ಹಬ್ಬವನ್ನು ಬರಮಾಡಿಕೊಳ್ಳಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಊಟ ಹೊಸ ಬಟ್ಟೆಗಳ ಸಂಭ್ರಮದ ಜೊತೆಗೆ ಮಕ್ಕಳು, ಯುವಜನರಿಗೆಲ್ಲ ದೀಪಾವಳಿ ಅಂದರೆ ಪಟಾಕಿ ಕ್ರೇಜ್ ಇದ್ದೆ ಇರುತ್ತದೆ. ಆದರೆ ಕಳೆದ ಬಾರಿ ಕೋವಿಡ್ ಹಿನ್ನಲೆ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿದ್ದ ಸರ್ಕಾರ ಹಸಿರು ಪಟಾಕಿಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿತ್ತು. ಈ ಬಾರಿಯೂ ಇದೇ ಸಿದ್ಧತೆಯಲ್ಲಿದೆಯಾ ಎಂಬ ಬಗ್ಗೆ ಜನರು ಎದುರು ನೋಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯಾಯುಕ್ತರಾದ ಗೌರವ್ ಗುಪ್ತ, ದೀಪಾವಳಿ ಸಂಭ್ರಮದ ಹಬ್ಬ. ಕೋವಿಡ್ ಹಿನ್ನಲೆ ಶಿಸ್ತುಬದ್ಧವಾಗಿ ಮಾಡಬೇಕಾಗುತ್ತದೆ. ಇದನ್ನು ಹೊರತು ಪಡಿಸಿ ಬೇರೆ ಮಾರ್ಗಸೂಚಿಗಳ ಬಗ್ಗೆ ತಯಾರು ಮಾಡಲು ಪಾಲಿಕೆ ಮಟ್ಟದಲ್ಲಿ ಸಿದ್ಧ ಇದ್ದೇವೆ. ಆದರೆ ಪ್ರತ್ಯೇಕ ನಿಯಮಗಳ ಬಗ್ಗೆ ಈಗಲೇ ಚಿಂತನೆ ನಡೆಸಿಲ್ಲ ಎಂದಿದ್ದಾರೆ.

ಶಾಸಕರ ಗ್ರಾಮ ವಾಸ್ತವ್ಯ ನೆಪದಲ್ಲಿ ಮೋಜು ಮಸ್ತಿ; ಕಾಂಗ್ರೆಸ್ ಆಕ್ರೋಶ

ಜೋರು ಶಬ್ದ ಮಾಡುವ, ವಾಯು ಮಾಲಿನ್ಯ ಮಾಡುವ ಪಟಾಕಿಗಳಿಗೆ ಎನ್‍ಜಿಟಿ ಈಗಾಗಲೇ ಬ್ರೇಕ್ ಹಾಕಿದೆ. ಪಟಾಕಿ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಾಡುವ ನಿಯಮಗಳನ್ನು ಸರ್ಕಾರ, ಬಿಬಿಎಂಪಿಯೂ ಪಾಲಿಸಬೇಕಾಗುತ್ತದೆ. ಹೀಗಾಗಿ ಬೇರೆ ಪಟಾಕಿಗಳ ಮಾರಟ ಖರೀದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.