ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಭಟ್ರಹಳ್ಳಿ ಗ್ರಾಮದ ಭೀಮಣ್ಣ ಮತ್ತು ಲಕ್ಷ್ಮೀದೇವಿ ದಂಪತಿಗಳ ಮಗನಾದ ಗ್ರಾಮೀಣ ಪ್ರತಿಭೆ ತಿಪ್ಪೇಸ್ವಾಮಿ ಎನ್.ಬಿ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ.
ಡಾ. ಎ. ರಾಮೇಗೌಡ, ಪ್ರಾಧ್ಯಾಪಕರು ಸಮಾಜಶಾಸ್ತ್ರ ವಿಭಾಗ ಇವರ ಮಾರ್ಗದರ್ಶನದಲ್ಲಿ “ರಾಜಕೀಯ ವಿಕೇಂದ್ರೀಕರಣ ಮತ್ತು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಚುನಾಯಿತ ಮಹಿಳಾ ಪ್ರತಿನಿಧಿಗಳು” ಸಮಾಜಶಾಸ್ತ್ರೀಯ ಅಧ್ಯಯನ (ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ) ಎಂಬ ಮಹಾಪ್ರಬಂಧ ಮಂಡಿಸಿರುತ್ತಾರೆ.
ಇವರು ಮಂಡಿಸಿದ ಈ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಇವರನ್ನು
ಪ್ರಾಧ್ಯಾಪಕರ ಬಳಗ,ಕುಟುಂಬ ವರ್ಗದವರು, ಸ್ನೇಹಿತರು, ಭಟ್ರಹಳ್ಳಿಯ ಸಮಸ್ತ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.