ಚೆನ್ನೈ: ತಮಿಳಿನ ಹಿರಿಯ ನಟ ಶ್ರೀಕಾಂತ್ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

1965ರಲ್ಲಿ ತೆರೆಕಂಡ ಜಯಲಲಿತಾ ಅಭಿನಯದ ‘ವೆನ್ನಿರ ಆಡೈ’ ಸಿನಿಮಾದಲ್ಲಿ ಶ್ರೀಕಾಂತ್‌ ಮೊದಲ ಬಾರಿಗೆ ನಟಿಸಿದ್ದರು. 4 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದರು. ನಾಯಕ, ಖಳ ನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಿರಿಯ ನಟರಾದ ಶಿವಾಜಿ ಗಣೇಶನ್, ರಜನಿಕಾಂತ್‌, ಕಮಲ್‌ ಹಾಸನ್‌ ಅವರ ಜೊತೆ ಕೂಡ ನಟಿಸಿದ್ದರು.

ತಮಿಳಿನ ಹಿರಿಯ ನಟ ಶ್ರೀಕಾಂತ್ ನಿಧನ

ನಟ ರಜನಿಕಾಂತ್‌ ಸೇರಿದಂತೆ ತಮಿಳು ಸಿನಿಮಾರಂಗದ ಗಣ್ಯರು ಶ್ರೀಕಾಂತ್‌ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪಗಳನ್ನು ಸೂಚಿಸಿದ್ದಾರೆ.