ಫುಟ್ಬಾಲ್ ಜಗತ್ತಿನಲ್ಲಿ ನಾಡಿಯಾ ನಾಡಿಮ್ ತಮ್ಮದೆ ದಾಖಲೆ, ಸಾಧನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಪಿಎಸ್‌ಜಿ ಮತ್ತು ಮ್ಯಾನ್ ಸಿಟಿ ಪರ ಆಡಿರುವ ನಾಡಿಯಾ ನಾಡಿಮ್ 200 ಗೋಲುಗಳನ್ನು ಗಳಿಸಿದ್ದಾರೆ. ಅವರು ಡೆನ್ಮಾರ್ಕ್ ಅನ್ನು 99 ಬಾರಿ ಪ್ರತಿನಿಧಿಸಿದ್ದು, 11 ಭಾಷೆಗಳನ್ನು ಮಾತನಾಡುತ್ತಾರೆ.

ಆದರೆ ನಾಡಿಮ್ ಅವರು ಇಂತಹ ಮಹತ್ವದ ಸಾಧನೆ ಮಾಡಲು ತನ್ನ ಜೀವನದುದ್ದಕ್ಕೂ, ನಂಬಲಾಗದ ಸಮಸ್ಯೆ, ನೋವುಗಳನ್ನು ಜಯಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ನಾಡಿಮ್ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

“2000ರಲ್ಲಿ ನನಗಿನ್ನೂ ಕೇವಲ 11 ವರ್ಷ ವಯಸ್ಸು. ಆಗ ನನ್ನ ತಂದೆ ರಬಾನಿ ನಾಡಿಮ್ ಅಫ್ಘಾನ್ ಸೈನ್ಯದಲ್ಲಿ ಜನರಲ್ ಆಗಿದ್ದರು. ಅವರನ್ನು ತಾಲಿಬಾನಿಗಳು ಯುದ್ಧ ಪೀಡಿತ ಅಫ್ಘಾನಿಸ್ತಾನದಿಂದ ಕರ್ಬಲಾ ಮರುಭೂಮಿಗೆ ಕರೆದೊಯ್ದಿದ್ದರು. ತಂದೆ ಮತ್ತೆ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವು. ಆದರೆ ಅಘ್ಫಾನಿಸ್ತಾನದ ಮೇಲೆ ತಾಲಿಬಾನಿಗಳು ನಿಯಂತ್ರಣ ತೆಗೆದುಕೊಂಡಾಗ ತಂದೆಯನ್ನು ಗಲ್ಲಿಗೇರಿಸಲಾಯಿತು. ಆ ದಿನದಿಂದ ಕಾಲ್ನಡಿಗೆ ಆರಂಭಿಸಿ ದೇಶದಿಂದ ಹೊರ ಬಂದೆ. ಸುಳ್ಳು ಗುರುತಿನಡಿಯಲ್ಲಿ ಪ್ರಯಾಣಿಸಿ ನಿರಾಶ್ರಿತರ ಶಿಬಿರದಲ್ಲಿ ಸೇರಿಕೊಂಡೆ. ಹೀಗೆ ನೂರಾರು ಕಷ್ಟಗಳನ್ನು ಎದುರಿಸುತ್ತಾ ಬಂದು ಈ ಹಂತಕ್ಕೆ ತಲುಪಿದ್ದೇನೆ” ಎಂದು ನಾಡಿಯಾ ನಾಡಿಮ್ ತಮ್ಮ ನೋವಿನ ದಿನದ ಬಗ್ಗೆ ಮಾತನಾಡಿದ್ದಾರೆ.