ನವದೆಹಲಿ: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ್ ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ನ ಕೋಪನ್ ಹೇಗ್ ನಲ್ಲಿರುವ ಅವರು, ಮೇ 3ರ ಮಂಗಳವಾರದಂದು ಡೆನ್ಮಾರ್ಕ್ ರಾಣಿಯವರನ್ನು ಭೇಟಿಯಾಗಿದ್ದಾರೆ.

82 ವರ್ಷ ವಯಸ್ಸಿನ ರಾಣಿ 1972 ರಿಂದ ಡೆನ್ಮಾರ್ಕ್‌ನ ಆಳ್ವಿಕೆ ನಡೆಸುತ್ತಿದ್ದಾರೆ. ಡ್ಯಾನಿಶ್ ರಾಜಪ್ರಭುತ್ವವು ವಿಶ್ವದ ಅತ್ಯಂತ ಹಳೆಯದಾಗಿದೆ. ಮೋದಿಯವರು ಅರಮನೆಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ.ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ 82 ವರ್ಷದ ಡೆನ್ಮಾರ್ಕ್ ಮಹಾರಾಣಿ ತಮ್ಮ ಅರಮನೆಯಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದರು.

ರಾಣಿಯ ಆಳ್ವಿಕೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿಯವರು ತಮ್ಮ ವಿದೇಶ ಪ್ರವಾಸದ ಸಂದರ್ಭದಲ್ಲಿ ಅನಿವಾಸಿ ಭಾರತೀಯರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.