ನವದೆಹಲಿ: ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದ ಬಳಿಕ ಏನಾದರು ಬದಲಾವಣೆ ಮಾಡಬಹುದೇ ಎಂದು ಯೋಚಿಸುತ್ತಿದ್ದ ಜನರಿಗೆ ಮಹತ್ವದ ಬದಲಾವಣೆಯೊಂದರ ಸುಳಿವು ಸಿಕ್ಕಿದೆ. ಸ್ವತಹಃ ಎಲಾನ್ ಮಸ್ಕ್ ಅವರೇ ಟ್ವಿಟ್ಟರ್ ಬಳಕೆದಾರರಿಗೆ ಶುಲ್ಕ ವಿಧಿಸುವ ಬಗ್ಗೆ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಸಾಂದರ್ಭಿಕ ಬಳಕೆದಾರರಿಗೆ ( ಸಾಮಾನ್ಯ ಬಳಕೆದಾರಿಗೆ) ಟ್ವಿಟ್ಟರ್ ಯಾವಾಗಲೂ ಉಚಿತವಾಗಿರುತ್ತದೆ. ಆದರೆ ವಾಣಿಜ್ಯ / ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ವೆಚ್ಚ ವಿಧಿಸಬಹುದು. ಈ ಮೂಲಕ ಹೆಚ್ಚಿನ ಅಮೆರಿಕನ್ನರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ನ ವ್ಯಾಪ್ತಿಯನ್ನು ವಿಸ್ತರಿಸಬಹುದು” ಎಂದು ಹೇಳಿದ್ದಾರೆ. ಹಾಗಾಗಿ, ಇನ್ನುಮುಂದೆ ವಾಣಿಜ್ಯ/ ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್ ಬಳಕೆಗೆ ಶುಲ್ಕ ಪಾವತಿಸುವ ಪಾವತಿಸುವ ಅನಿವಾರ್ಯತೆ ಬರುವ ಸಾಧ್ಯತೆ ಇದೆ.