ಟ್ರಕ್ ಗೆ ಟೆಂಪೋ ಡಿಕ್ಕಿ ಸ್ಥಳದಲ್ಲಿ 8 ಮಂದಿ ಸಾವು.! - BC Suddi
ಟ್ರಕ್ ಗೆ ಟೆಂಪೋ ಡಿಕ್ಕಿ ಸ್ಥಳದಲ್ಲಿ 8 ಮಂದಿ ಸಾವು.!

ಟ್ರಕ್ ಗೆ ಟೆಂಪೋ ಡಿಕ್ಕಿ ಸ್ಥಳದಲ್ಲಿ 8 ಮಂದಿ ಸಾವು.!

 

ನೆಲ್ಲೂರು : ಐವರು ಮಹಿಳೆಯರು ಸೇರಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ.ನೆಲ್ಲೂರು ಜಿಲ್ಲೆಯ ಬುಚಿರೆಡ್ಡಿಪಾಲೆಂ ಮಂಡಲದ ದಾಮರಮಡುಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಿಲ್ಲಿಸಿದ್ದ ಟ್ರಕ್ ಗೆ ಟೆಂಪೋ ಡಿಕ್ಕಿಯಾದ ಪರಿಣಾಮ ಐವರು ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶ್ರೀಲಂ ಯಾತ್ರೆ ಮುಗಿಸಿ ವಾಪಸ್ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ತಮಿಳುನಾಡು ಮೂಲದವರಾಗಿದ್ದು ಒಟ್ಟು 14 ಪ್ರಯಾಣಿಕರಿದ್ದು, 8 ಮಂದಿ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

error: Content is protected !!