ಜಿಲ್ಲಾ ಪಂಚಾಯತ್-ತಾಪಂ ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ: ಆರ್. ಅಶೋಕ್.! - BC Suddi
ಜಿಲ್ಲಾ ಪಂಚಾಯತ್-ತಾಪಂ ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ: ಆರ್. ಅಶೋಕ್.!

ಜಿಲ್ಲಾ ಪಂಚಾಯತ್-ತಾಪಂ ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ: ಆರ್. ಅಶೋಕ್.!

 

ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

 ಕೊರೊನಾ ಎರಡನೆ ಅಲೆ ಜಾಸ್ತಿ ಇದೆ. ಈ ಸಂದರ್ಭದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಸರ್ಕಾರ ಹೊರಡಿಸಿದ ಎರಡನೇ ಮಾರ್ಗಸೂಚಿಯೇ ಮುಂದುವರಿಯಲಿದೆ

ಈಗಿನ ಕರ್ಫ್ಯೂ ಫಲಿತಾಂಶ 14 ದಿನದ ಬಳಿಕ ತಿಳಿಯಲಿದೆ. ಆನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಮೇ 4ರಿಂದ8ರವರೆಗೆ ಕೊರೊನಾ ಸೋಂಕು ಹೆಚ್ಚಾಗಲಿದೆ  ಎಂದು ತಜ್ಞರು ತಿಳಿಸಿದ್ದಾರೆ. ಇದರ ಅನ್ವಯ ನಾವು ಮಾನದಂಡ ರೂಪಿಸಲಿದ್ದೇವೆ. ಆದರೆ ನಾಳೆ ಬೆಂಗಳೂರಿನ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗುವುದು. ಈ ನಿರ್ಧಾರಕ್ಕೆ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ ಎಂದು ಅವರು ತಿಳಿಸಿದರು.