ಜಿಲ್ಲಾ ಆಸ್ಪತ್ರಗೆ ಬರುವ ರೋಗಿಗಳಿಗೆ ಆಹಾರ ತಯಾರಿಸಿ ಹಂಚುತ್ತಿರುವ ಅಶೋಕ್ ನಾಯ್ಡು ಕುಟುಂಬ - BC Suddi
ಜಿಲ್ಲಾ ಆಸ್ಪತ್ರಗೆ ಬರುವ ರೋಗಿಗಳಿಗೆ ಆಹಾರ ತಯಾರಿಸಿ ಹಂಚುತ್ತಿರುವ ಅಶೋಕ್ ನಾಯ್ಡು ಕುಟುಂಬ

ಜಿಲ್ಲಾ ಆಸ್ಪತ್ರಗೆ ಬರುವ ರೋಗಿಗಳಿಗೆ ಆಹಾರ ತಯಾರಿಸಿ ಹಂಚುತ್ತಿರುವ ಅಶೋಕ್ ನಾಯ್ಡು ಕುಟುಂಬ

 

ಚಿತ್ರದುರ್ಗ: ಕೊರೋನಾ ಎರಡನೆ ಹಂತದ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಜಿಲ್ಲಾ ಕಾಂಗ್ರೆಸ್ ವಿವಿಧ ಘಟಕಗಳಿಂದ ದಿನನಿತ್ಯವೂ ವಿತರಿಸಲಾಗುತ್ತಿರುವ ಆಹಾರವನ್ನು ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್‌ನಾಯ್ಡು ತಮ್ಮ ನಿವಾಸದಲ್ಲಿ ತಯಾರಿಸುತ್ತಿದ್ದಾರೆ. ಇದಕ್ಕೆ ಮನೆ ಮಂದಿಯೆಲ್ಲಾ ಕೈಜೋಡಿಸುತ್ತಿದ್ದಾರೆ. ಆಹಾರವನ್ನು ಪೊಟ್ಟಣದಲ್ಲಿ ತುಂಬಲು ಮಕ್ಕಳು ನೆರವಾಗುತ್ತಿರುವುದು ವಿಶೇಷ.

ಜಿಲ್ಲಾ ಕಾಂಗ್ರೆಸ್ ಇಂಟೆಕ್ ಘಟಕದ ಜಿಲ್ಲಾಧ್ಯಕ್ಷ ಅಶೋಕ್‌ನಾಯ್ಡು ಸ್ವತಃ ತಾವೇ ಆಹಾರ ತಯಾರಿಕೆಯಲ್ಲಿ ತೊಡಗಿ ನಂತರ ಪೊಟ್ಟಣದಲ್ಲಿ ಆಹಾರವನ್ನು ತುಂಬಿ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ರವರ ನೇತೃತ್ವದಲ್ಲಿ ರೋಗಿಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಮೋಹನ್ ಪೂಜಾರಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹಮದ್ ಸಾಬ್ ಜಿ.ಆರ್.ಹಳ್ಳಿ ಇವರುಗಳು ಆಹಾರ ಪೊಟ್ಟಣಗಳ ಹಂಚಿಕೆ ಸಮಯದಲ್ಲಿ ನೆರವಾಗುತ್ತಿದ್ದಾರೆ.