ಜಲಶಕ್ತಿ ಅಭಿಯಾನ, ಕ್ಯಾಚ್ ದಿ ರೇನ್ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ - BC Suddi
ಜಲಶಕ್ತಿ ಅಭಿಯಾನ, ಕ್ಯಾಚ್ ದಿ ರೇನ್ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಜಲಶಕ್ತಿ ಅಭಿಯಾನ, ಕ್ಯಾಚ್ ದಿ ರೇನ್ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನದ ಅಂಗವಾಗಿ ಸೋಮವಾರ ಜಲಶಕ್ತಿ ಅಭಿಯಾನ, ಕ್ಯಾಚ್ ದಿ ರೇನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ದೇಶ ಪ್ರತಿಯೋರ್ವ ನಾಗರಿಕರೂ ಭಾಗವಹಿಸಬೇಕು. ದೇಶವು ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು, ನೀರಿನ ಸಮಸ್ಯೆ ಹೆಚ್ಚುತ್ತಿದೆ. ಹಾಗಾಗಿ ಈ ಅಭಿಯಾನದಲ್ಲಿ ದೇಶದ ಪ್ರತಿಯೋರ್ವರು ನಾಗರಿಕರೂ ಭಾಗವಹಿಸಬೇಕು” ಎಂದು  ಮನವಿ ಮಾಡಿದ್ದಾರೆ.

“ಜೀವನ್‌ ಮಿಷನ್‌ ಪ್ರಾರಂಭವಾದ ಬಳಿಕ ಸುಮಾರು ನಾಲ್ಕು ಕೋಟಿ ಹೊಸ ಕುಟುಂಬಗಳು ಇಷ್ಟು ಕಡಿಮೆ ಅವಧಿಯಲ್ಲಿ ಸಂಪರ್ಕ ಹೊಂದಿದೆ. ಒಂದೂವರೆ ವರ್ಷದ ಹಿಂದೆ ನಮ್ಮ ದೇಶದ 19 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3.5 ಕೋಟಿ ಕುಟುಂಬಗಳು ಮಾತ್ರವೇ ನಲ್ಲಿಯಿಂದ ನೀರು ಪಡೆಯುತ್ತಿದ್ದರು” ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಜಲಶಕ್ತಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಂಡಿದ್ದರು.

error: Content is protected !!