ಬೆಂಗಳೂರು: ಜಪ್ತಿಯಾದ ವಾಹನ 24 ಗಂಟೆಯೊಳಗೆ ಮಾಲೀಕರಿಗೆ ಅಪಘಾತ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು 24 ಗಂಟೆಯೊಳಗೆ, ಅದರ ಮಾಲೀಕರಿಗೆ ತಲುಪಿಸಬೇಕು ಎಂದು ಬೆಂಗಳೂರು ಸಂಚಾರಿ ಪೊಲೀಸ್ ವಿಶೇಷ ಕಮಿಷನರ್ ಡಾ.ಸಲೀಂ ಆದೇಶಿಸಿದ್ದಾರೆ.
ಈ ಹಿಂದೆ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲೇ ಸ್ಟೇಷನ್ ಆವರಣದಲ್ಲೇ ಇರುತ್ತಿದ್ದವು. ಇದರಿಂದ ಸ್ಟೇಷನ್ ಆವರಣದಲ್ಲಿ ಸ್ಥಳದ ಕೊರತೆ ಎದುರಾಗುತ್ತಿತ್ತು. ಈ ಹಿನ್ನೆಲೆ ಆದೇಶ ಹೊರಡಿಸಿರುವ ಕಮಿಷನರ್, ಕೆಲ ಪರೀಕ್ಷೆಗಳ ನಂತರ ಮುಚ್ಚಳಿಕೆ ಬರೆಸಿಕೊಂಡು ಮಾಲೀಕರಿಗೆ ವಾಹನ ವಾಪಸ್ ನೀಡಬೇಕು ಎಂದಿದ್ದಾರೆ.