ಅಯೋಧ್ಯೆ: “ಜನವರಿ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಎರಡನೇ ಹಂತ ಪೂರ್ಣವಾಗಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, “ಅಡಿಪಾಯದ ಒಂದು ಭಾಗ ಪೂರ್ಣಗೊಂಡಿದ್ದು, 2ನೇ ಪ್ರತಿಷ್ಠಾನದ ಪ್ರಕ್ರಿಯೆಯಲ್ಲಿದೆ. ಇದು ಜನವರಿಗೆ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ದೇವಾಲಯದ ನಿರ್ಮಾಣ ಕಾರ್ಯವು 24×7 ನಡೆಯುತ್ತದೆ” ಎಂದಿದ್ದಾರೆ.

“ನಿರ್ಮಾಣ ಕಾರ್ಯದ ಪ್ರಕ್ರಿಯೆಯನ್ನು ತೋರಿಸುವ 3ಡಿ ಅನಿಮೇಷನ್‌ ಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‌‌ ಮೂಲಕ ನಾವು 3ಡಿ ಚಿತ್ರದ ಸಹಾಯದಿಂದ ರಾಮಮಂದಿರದಿಂದ ನಿರ್ಮಾಣ ಕಾರ್ಯವನ್ನು ತೋರಿಸಲು ಪ್ರಯತ್ನಿಸಿದ್ದೇವೆ” ಎಂದು ತಿಳಿಸಿದ್ದಾರೆ.

“ದೇವಾಲಯದ ನಿರ್ಮಾಣ ಕಾರ್ಯದಲ್ಲಿ 5 ಅಡಿ ಉದ್ದ, 3 ಅಡಿ ಅಗಲ ಹಾಗೂ 2.5 ಅಡಿ ಎತ್ತರದ ಸುಮಾರು 17,000 ಕಲ್ಲುಗಳನ್ನು ಬಳಕೆ ಮಾಡಬಹುದು” ಎಂದು ಹೇಳಿದ್ದಾರೆ.