ನವದೆಹಲಿ: ಚುನಾವಣೆ ನಡೆಯುವ ರಾಜ್ಯಗಳಲ್ಲಿ ಚುನಾವಣಾ ರ್‍ಯಾಲಿ, ಸಮಾವೇಶ ನಡೆಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ಅಭ್ಯರ್ಥಿಯ ಪರವಾಗಿ ನಡೆಸುವ ರ್‍ಯಾಲಿ, ಸಮಾವೇಶಗಳಿಗೆ ಆಯೋಗ ಸಮ್ಮತಿ ಸೂಚಿಸಿದ್ದು, ಕೊರೊನಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ಇನ್ನು ಒಳಾಂಗಣ ಪ್ರದೇಶದಲ್ಲಿ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೊರಾಂಗಣ ಪ್ರದೇಶದಲ್ಲಿ 1000 ಜನರಿಗೆ ಸೇರಬಹುದು ಎಂದಿದೆ. ಆದಾಗ್ಯೂ, ದೊಡ್ಡ ರ್‍ಯಾಲಿಗಳ ಮೇಲಿನ ನಿಷೇಧ ಇನ್ನೂ ಮುಂದುವರಿಯುತ್ತದೆ.

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರದಲ್ಲಿ ಫೆಬ್ರವರಿ 14 ರಿಂದ ವಿಧಾನಸಭಾ ಚುನಾವಣೆಗಳು ಪ್ರಾರಂಭವಾಗಲಿವೆ.