ಚೀನಾ : ಈ ವರ್ಷದ ಮಾರ್ಚ್‌ನಲ್ಲಿ ಚೀನಾ ಈಸ್ಟರ್ನ್ ಏರ್‌ಲೈನ್ಸ್ ನ ಜೆಟ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವಿಮಾನದ ಕಾಕ್‌ಪಿಟ್‌ನಲ್ಲಿ ಯಾರೋ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂಬುವುದು ವಿಮಾನದ ಬ್ಲ್ಯಾಕ್ ಬಾಕ್ಸ್‌ನಿಂದ ದೊರೆತ ಡೇಟಾ ಮೂಲಕ ಕಂಡು ಬಂದಿದೆ ಎಂದು ಯುಎಸ್ ಅಧಿಕಾರಿಗಳ ಪ್ರಾಥಮಿಕ ಮೌಲ್ಯಮಾಪನದಲ್ಲಿ ತಿಳಿದು ಬಂದಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿದೆ.

ಈ ವರ್ಷದ ಮಾರ್ಚ್ 21 ರಂದು, ಚೀನಾದ ಈಸ್ಟರ್ನ್ ಏರ್‌ಲೈನ್ಸ್ ಗೆ ಸೇರಿದ ವಿಮಾನ ಬೋಯಿಂಗ್ 737-89P ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಪತನವಾಗಿತ್ತು. ದುರಂತದಲ್ಲಿ 132 ಜನರು ಮೃತಪಟ್ಟಿದ್ದರು. ದುರಂತಕ್ಕೀಡಾದ ವಿಮಾನ ಕುನ್ಮಿಂಗ್ ಚಾಂಗ್‌ಶುಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುವಾಂಗ್‌ಝೌಗೆ ಹೊರಟಿತ್ತು.