ಗಾಡಿ ಮೇಲೆ ಹೆಸರು ಬರೆಸುವ ಬಾಡಿಗೆ ದಂಡ ಫಿಕ್ಸ್ - BC Suddi
ಗಾಡಿ ಮೇಲೆ ಹೆಸರು ಬರೆಸುವ ಬಾಡಿಗೆ ದಂಡ ಫಿಕ್ಸ್

ಗಾಡಿ ಮೇಲೆ ಹೆಸರು ಬರೆಸುವ ಬಾಡಿಗೆ ದಂಡ ಫಿಕ್ಸ್

ಬೆಂಗಳೂರು : ಯಾವುದೇ ವಾಹನ ನೇಮ್ ಪ್ಲೇಟ್ ಮೇಲೆ ಕೇವಲ ಗಾಡಿಯ ನಂಬರ್ ಮಾತ್ರ ನಮೂದಿಸಿರಬೇಕು ಬದಲಾಗಿ ನಿಯಮ ಬಾಹಿರವಾಗಿ ಸಂಘ-ಸಂಸ್ಥೆ, ಅರೆ ಸರ್ಕಾರಿ ಮತ್ತು ಸರ್ಕಾರಿ ವಾಹನಗಳು ನೋಂದಣಿ ಫಲಕಗಳಲ್ಲಿ ಲಾಂಛನ, ಹೆಸರು ಪ್ರದರ್ಶಿಸಿದರೆ ದಂಡ ತರೆಬೇಕಾಗುತ್ತದೆ.

ಹೌದು ಉಚ್ಚ ನ್ಯಾಯಾಲಯ ಅನಾವಶ್ಯಕವಾಗಿ ವಾಹನದ ನಾಮಫಲಕದ ಮೇಲೆ ದೊಡ್ಡದಾಗಿ ಸಂಘ-ಸಂಸ್ಥೆಗಳ ಹೆಸರು ಲಾಂಛನ ಪ್ರದರ್ಶಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಇಂದು ಅಪರ ಸಾರಿಗೆ ಆಯುಕ್ತ ನರೇಂದ್ರ ಎಲ್. ಹೋಲ್ಕರ್ ಮತ್ತು ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ದಾಳಿ ನಡೆಸಿ ನಾಮಫಲಕಗಳಲ್ಲಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳ ಹೆಸರು ಲಾಂಛನ ಪ್ರದರ್ಶಿಸಿದ 100 ಕ್ಕೂ ಹೆಚ್ಚು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ದೋಷವುಳ್ಳ ನಾಮಫಕಗಳನ್ನು ತೆರವುಗೊಳಿಸಿದ್ದಾರೆ.

error: Content is protected !!