ಗುಜರಾತ್: ಭಾರತದ ಖ್ಯಾತ ವಾಸ್ತುಶಿಲ್ಪಿ ಬಾಲಕೃಷ್ಣ ವಿಠಲದಾಸ್ ದೋಶಿ (95) ಗುಜರಾತ್‌ನಲ್ಲಿ ವಿಧಿವಶರಾಗಿದ್ದಾರೆ. 2020ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ಬಾಲಕೃಷ್ಣ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. IIM ಬೆಂಗಳೂರು, NIFT ದೆಹಲಿ ಮತ್ತು ಅಹಮದಾಬಾದ್‌ನ CEPT ವಿವಿಗಳ ವಾಸ್ತುರಚನೆಗಳನ್ನು ವಿನ್ಯಾಸಗೊಳಿಸಿದ್ದಾರೆ. ವಾಸ್ತುಶಿಲ್ಪಕ್ಕಾಗಿ ನೀಡುವ ವಿಶ್ವದ ಅತ್ಯುನ್ನತ ಗೌರವ ರಾಯಲ್ ಗೋಲ್ಡ್ ಮೆಡಲ್ ಗೂ ಬಾಲಕೃಷ್ಣ ಪಾತ್ರರಾಗಿದ್ದಾರೆ.