ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಅವರು ಕ್ವೀನ್ಸ್‌ ಲ್ಯಾಂಡ್‌ನಲ್ಲಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ರಾಯಿಟರ್ಸ್‌ ವರದಿಯ ಪ್ರಕಾರ, ಶನಿವಾರ ರಾತ್ರಿ ಟೌನ್ಸ್‌ ವಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಹರ್ವೆ ರೇಂಜ್‌ ನಲ್ಲಿ ಸೈಮಂಡ್ಸ್ ಸಾವನ್ನಪ್ಪಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟ್ವಿಟರ್‌ನಲ್ಲಿ ಅವರ ಸಾವನ್ನು ಖಚಿತಪಡಿಸಿದ್ದು, ಸಂತಾಪ ಸೂಚಿಸಿದೆ.

ಕ್ರಿಕೆಟ್ ದಿಗ್ಗಜರನ್ನು ಕಳೆದುಕೊಂಡಿರುವ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಎರಡು ಶತಕಗಳನ್ನು ದಾಖಲಿಸಿದ್ದಾರೆ. ಅವರು ಆಸ್ಟ್ರೇಲಿಯಾ ಪರ 198 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ಎರಡು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು ಎಂಬುದು ವಿಶೇಷ.!