ಕೋವಿಡ್ ಸೋಂಕು ಹೆಚ್ಚಳ: 18 ರಂದು ಸರ್ವಪಕ್ಷಗಳ ಸಭೆ ಮುಂದಕ್ಕೆ.! - BC Suddi
ಕೋವಿಡ್ ಸೋಂಕು ಹೆಚ್ಚಳ: 18 ರಂದು ಸರ್ವಪಕ್ಷಗಳ ಸಭೆ ಮುಂದಕ್ಕೆ.!

ಕೋವಿಡ್ ಸೋಂಕು ಹೆಚ್ಚಳ: 18 ರಂದು ಸರ್ವಪಕ್ಷಗಳ ಸಭೆ ಮುಂದಕ್ಕೆ.!

 

ಬೆಂಗಳೂರು: ಏ. 18ರಂದು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್​​  ಸೋಂಕು ನಿಯಂತ್ರಣ ಕುರಿತ ಚರ್ಚೆಗಾಗಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಕರೆದಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ.

ಇದೇ ಭಾನುವಾರ ಸಂಜೆ 4 ಗಂಟೆಗೆ ಸಭೆ ನಿಗದಿಸಿ  ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದರು. ಇದೀಗ ಸಿಎಂ ಮತ್ತೊಮ್ಮೆ ಕೋವಿಡ್​ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.

ಇದಕ್ಕೆ ಮೊದಲು ಸಭೆಯನ್ನು ಮುಂದೂಡುವ ಬದಲು ಸಿಎಂ ಅನುಪಸ್ಥಿತಿಯಲ್ಲಿ ಹಿರಿಯ ಸಚಿವರೊಬ್ಬರ ಉಸ್ತುವಾರಿಯಲ್ಲಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಅನುಮತಿ ನೀಡಿದ್ದು, ಸಭೆ ಉಸ್ತುವಾರಿ ವಹಿಸುವ ಸಚಿವರ ಹೆಸರು ಕುರಿತು ನಾಳೆ ಪ್ರಕಟಣೆ ಹೊರಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಇದೀಗ ಈ ಸಭೆಯನ್ನು ಮುಂದೂಡಲಾಗಿದೆ.