'ಕೋರ್ಟ್‌‌‌ಗೆ ಹೋಗೋದು ನನ್ನ ಹಕ್ಕು, ಪ್ರಶ್ನಿಸಲು ಕಾಂಗ್ರೆಸ್‌ಗೇನು ಹಕ್ಕಿದೆ' - ಬಿ.ಸಿ.ಪಾಟೀಲ್ - BC Suddi
‘ಕೋರ್ಟ್‌‌‌ಗೆ ಹೋಗೋದು ನನ್ನ ಹಕ್ಕು, ಪ್ರಶ್ನಿಸಲು ಕಾಂಗ್ರೆಸ್‌ಗೇನು ಹಕ್ಕಿದೆ’ – ಬಿ.ಸಿ.ಪಾಟೀಲ್

‘ಕೋರ್ಟ್‌‌‌ಗೆ ಹೋಗೋದು ನನ್ನ ಹಕ್ಕು, ಪ್ರಶ್ನಿಸಲು ಕಾಂಗ್ರೆಸ್‌ಗೇನು ಹಕ್ಕಿದೆ’ – ಬಿ.ಸಿ.ಪಾಟೀಲ್

ಬೆಂಗಳೂರು:  “ಕೋರ್ಟ್‌‌‌ಗೆ ಹೋಗುವುದು ನನ್ನ ಹಕ್ಕು. ಅದನ್ನು ಪ್ರಶ್ನಿಸುವುದಕ್ಕೆ ಕಾಂಗ್ರೆಸ್ ನವರಿಗೆ ಏನು ಹಕ್ಕಿದೆ. ಕಾಂಗ್ರೆಸ್ ನಾಯಕರು ನೀತಿ ಸಿದ್ದಾಂತದ ಮೇಲೆ ಹೊರಾಟ ಮಾಡಬೇಕು” ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌‌‌ಗೆ ಹೋಗುವುದು ನನ್ನ ಹಕ್ಕು. ಅದನ್ನು ಪ್ರಶ್ನಿಸುವುದಕ್ಕೆ ಕಾಂಗ್ರೆಸ್ ನವರಿಗೆ ಏನು ಹಕ್ಕಿದೆ. ಕಾಂಗ್ರೆಸ್ ನಾಯಕರು ನೀತಿ ಸಿದ್ದಾಂತದ ಮೇಲೆ ಹೊರಾಟ ಮಾಡಬೇಕು. ಆದರೆ ಹೋರಾಟಕ್ಕೆ ಅವರಿಗೆ ಏನೂ ವಿಷಯ ಸಿಗುತ್ತಿಲ್ಲ. ಅವರ ಸರ್ಕಾರವನ್ನು ತೆಗೆದ ಕಾರಣಕ್ಕೆ ನಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದರು” ಎಂದರು.

ಇನ್ನು “ರೈತ ಹೋರಾಟದ ಬಗ್ಗೆ ಮಾತನಾಡಿದ ಅವರು, ರೈತರು ಯಾವ ಹೋರಾಟ ಬೇಕಾದರೂ ಮಾಡಲಿ, ಸರ್ಕಾರಕ್ಕೆ ಮನವಿ ಕೊಡಲಿ. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇರುವ ಕಾಯ್ದೆಗಳು. ಯಾವುದೇ ಕಾರಣಕ್ಕೂ ಆ ಕಾಯ್ದೆಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

error: Content is protected !!