ಕೊರೊನಾ ವೈರಸ್ ಹೆಚ್ಚಳ ಪ್ರದೇಶವನ್ನು ಲಾಕ್ ಡೌನ್.! ಕೇಂದ್ರ ಸರಕಾರ ಸೂಚನೆ.! - BC Suddi
ಕೊರೊನಾ ವೈರಸ್ ಹೆಚ್ಚಳ ಪ್ರದೇಶವನ್ನು ಲಾಕ್ ಡೌನ್.! ಕೇಂದ್ರ ಸರಕಾರ ಸೂಚನೆ.!

ಕೊರೊನಾ ವೈರಸ್ ಹೆಚ್ಚಳ ಪ್ರದೇಶವನ್ನು ಲಾಕ್ ಡೌನ್.! ಕೇಂದ್ರ ಸರಕಾರ ಸೂಚನೆ.!

 

ನವದೆಹಲಿ: ಕೇಂದ್ರ ಸರ್ಕಾರ ಕೊರೋನಾ ವೈರಸ್ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ತಕ್ಷಣವೇ ಲಾಕ್‌ಡೌನ್‌ ವಿಧಿಸುವಂತೆ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗುರುವಾರ ಸೂಚಿಸಿದೆ.

ಆದಾಗ್ಯೂ, ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ತನ್ನ ಕೋವಿಡ್ ಮಾರ್ಗಸೂಚಿಗಳಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಗಳಲ್ಲಿ, ‘ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣ ಗಮನದಲ್ಲಿಟ್ಟುಕೊಂಡು ಅಗತ್ಯವಾದ ನಿಯಂತ್ರಣ ಕ್ರಮಗಳನ್ನು’ ತೆಗೆದುಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.