ಕೊರೊನಾ ಲಸಿಕೆ ಕೊರತೆ.! ಇನ್ನೊಂದೆಡೆ ಲಸಿಕೆ ವ್ಯರ್ಥ.! - BC Suddi
ಕೊರೊನಾ ಲಸಿಕೆ ಕೊರತೆ.! ಇನ್ನೊಂದೆಡೆ ಲಸಿಕೆ ವ್ಯರ್ಥ.!

ಕೊರೊನಾ ಲಸಿಕೆ ಕೊರತೆ.! ಇನ್ನೊಂದೆಡೆ ಲಸಿಕೆ ವ್ಯರ್ಥ.!

ನವದೆಹಲಿ : ಎಪ್ರಿಲ್‌ 11ರವರೆಗೆ ಭಾರತದಲ್ಲಿ 10 ಕೋಟಿ ಡೋಸ್‌ಗಳ ಪೈಕಿ ಬರೋಬ್ಬರಿ 44 ಲಕ್ಷ ಡೋಸ್‌ ಲಸಿಕೆ ವ್ಯರ್ಥಗೊಳಿಸಿರುವುದು ಆರ್‌ಟಿಐ ಅರ್ಜಿಗೆ ಕೇಂದ್ರ ನೀಡಿದ ಉತ್ತರದಿಂದ ತಿಳಿದುಬಂದಿದೆ.

ಈ ಪೈಕಿ ತಮಿಳುನಾಡು ಮುಂಚೂಣಿಯಲ್ಲಿದ್ದು, ಅಲ್ಲಿ ಶೇ.12ರಷ್ಟು ಲಸಿಕೆ ವ್ಯರ್ಥವಾಗಿದೆ. ಬಳಿಕ ಹರಿಯಾಣ (ಶೇ.9.74), ಪಂಜಾಬ್‌ (ಶೇ.8.2), ಮಣಿಪುರ (ಶೇ.7.8), ತೆಲಂಗಾಣ (ಶೇ.7.55) ನಂತರದ ಸ್ಥಾನದಲ್ಲಿವೆ.

ಲಸಿಕೆಯನ್ನು ಕನಿಷ್ಠ ಪ್ರಮಾಣದಲ್ಲಿ ವ್ಯರ್ಥಗೊಳಿಸಿದ ರಾಜ್ಯಗಳ ಪೈಕಿ ಕೇರಳ, ಪ. ಬಂಗಾಲ, ಹಿಮಾಚಲ ಪ್ರದೇಶ, ಮಿಝೋರಾಂ, ಗೋವಾ, ದಾಮನ್‌ ಮತ್ತು ದಿಯು, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷ ದ್ವೀಪಗಳು ಮುಂಚೂಣಿಯಲ್ಲಿವೆ