ಕೊರೊನಾ ಎರಡನೇ ಅಲೆ: ನಾಳೆಯಿಂದ  ತರಕಾರಿ ಮಾರುಕಟ್ಟೆ ಸ್ಥಳಾಂತರ - BC Suddi
ಕೊರೊನಾ ಎರಡನೇ ಅಲೆ: ನಾಳೆಯಿಂದ  ತರಕಾರಿ ಮಾರುಕಟ್ಟೆ ಸ್ಥಳಾಂತರ

ಕೊರೊನಾ ಎರಡನೇ ಅಲೆ: ನಾಳೆಯಿಂದ  ತರಕಾರಿ ಮಾರುಕಟ್ಟೆ ಸ್ಥಳಾಂತರ

 

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಕೊರೊನಾ ವೈರಸ್ (ಕೋವಿಡ್-19) 2ನೇ ಅಲೆ ಹರಡುತ್ತಿರುವ ಹಿನ್ನೆಯಲ್ಲಿ ಮುನ್ನೇಚ್ಚರಿಕೆಯಾಗಿ ಸ್ವಚ್ಛತೆ ಮತ್ತು ನೈರ್ಮಲ್ಯೀಕರಣವನ್ನು ಕಾಪಾಡುವ ದೃಷ್ಟಿಯಿಂದ ತರಕಾರಿ, ಹಣ್ಣು, ಸೊಪ್ಪು ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಏಪ್ರಿಲ್ 21 ರಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಎಸ್‍ಜೆಎಂ ಕ್ರೀಡಾಂಗಣಕ್ಕೆ ಹಾಗೂ ಎಪಿಎಂಸಿ ಹತ್ತಿರುವ ಇರುವ ತರಕಾರಿ ಮಳಿಗೆಗಳಿಗೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಮಾರುಕಟ್ಟೆಗಳಿಗೆ ತೆರಳಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)