'ಕೇರಳ ಸರ್ಕಾರ ಕೇಂದ್ರಕ್ಕೆ ಸಹಕರಿಸದ ಕಾರಣ ಜನರು ಸಂಕಷ್ಟದಲ್ಲಿದ್ದಾರೆ' - ಸಂಸದ ತೇಜಸ್ವಿ - BC Suddi
‘ಕೇರಳ ಸರ್ಕಾರ ಕೇಂದ್ರಕ್ಕೆ ಸಹಕರಿಸದ ಕಾರಣ ಜನರು ಸಂಕಷ್ಟದಲ್ಲಿದ್ದಾರೆ’ – ಸಂಸದ ತೇಜಸ್ವಿ

‘ಕೇರಳ ಸರ್ಕಾರ ಕೇಂದ್ರಕ್ಕೆ ಸಹಕರಿಸದ ಕಾರಣ ಜನರು ಸಂಕಷ್ಟದಲ್ಲಿದ್ದಾರೆ’ – ಸಂಸದ ತೇಜಸ್ವಿ

”ಕೇರಳ ಸರ್ಕಾರ ಕೇಂದ್ರಕ್ಕೆ ಸಹಕರಿಸದ ಕಾರಣ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಹಲವು ಜನಸ್ನೇಹಿ ಅಭಿಯಾನದ ಫಲವು ಕೇರಳಿಗರಿಗೆ ದೊರೆಯುತ್ತಿಲ್ಲ” ಎಂದು ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೂರಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆಗೆ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ತ್ರಿಪಿನುತುರಾದಲ್ಲಿ ಜೆಟಿಪಿಎಸಿಯ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.

”ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೀಡುವ ಅಸಹಕಾರದಿಂದಾಗಿ ಇಲ್ಲಿನ ಜನರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೇ ಪರಿಸ್ಥಿತಿಯು ಪಶ್ಚಿಮ ಬಂಗಾಳದಲ್ಲಿಯೂ ಇದೆ” ಎಂದು ಆರೋಪಿಸಿದರು.

”ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ರಾಜ್ಯ ಸರ್ಕಾರವು ನಕಲಿ ಮಹಿಳಾ ಸಬಲೀಕರಣವನ್ನು ನಡೆಸಲು ಮುಂದಾಗಿದೆ. ಇದರಿಂದಾಗಿ ಸಮಸ್ಯೆಯೇ ಎದುರಾದದ್ದು. ಯಾವುದೇ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದು ತಪ್ಪು” ಎಂದು ಹೇಳಿದರು.

”ಉನ್ನತ ಶಿಕ್ಷಣ, ಆರ್ಥಿಕತೆ, ವಿಧಾನಸಭೆ, ಸಂಸತ್ತಿನಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಬಲೀಕರಣ ನಡೆಸಬೇಕು ಹೊರತು ಈ ಶಬರಿಮಲೆ ಪ್ರವೇಶದಿಂದಲ್ಲ” ಎಂದು ಟೀಕಿಸಿದ ಸಂಸದ ತೇಜಸ್ವಿ, ”ಶಬರಿಮಲೆಯಲ್ಲಿ ಸಂಪ್ರದಾಯಗಳನ್ನು ಕಾಪಾಡಲು ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.

”ಮಹಿಳಾ ಸಬಲೀಕರಣ ಬಗ್ಗೆ ತನ್ನ ಮಾತು ಮುಂದುವರೆಸಿದ ಸಂಸದ ತೇಜಸ್ವಿ, ಬಿಜೆಪಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 17 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ” ಎಂದು ಕೂಡಾ ಹೇಳಿದರು. ಇನ್ನು, ”ಲವ್ ಜಿಹಾದ್ ಎಂಬುವುದು ಹಿಂದು-ಮುಸ್ಲಿಂ ವಿವಾದವಲ್ಲ. ಮಹಿಳೆಯರ ವಿಮೋಚನೆಯ ವಿಷಯ” ಎಂದೂ ಹೇಳಿದರು.

error: Content is protected !!