ಕೇಂದ್ರ ಸರಕಾರಿ ನೌಕರರು-ಪಿಂಚಿಣಿದಾರರಿಗೆ ಖುಷಿ ಸುದ್ದಿ..! - BC Suddi
ಕೇಂದ್ರ ಸರಕಾರಿ ನೌಕರರು-ಪಿಂಚಿಣಿದಾರರಿಗೆ ಖುಷಿ ಸುದ್ದಿ..!

ಕೇಂದ್ರ ಸರಕಾರಿ ನೌಕರರು-ಪಿಂಚಿಣಿದಾರರಿಗೆ ಖುಷಿ ಸುದ್ದಿ..!

ನವದೆಹಲಿ: ಕೇಂದ್ರ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಜುಲೈ 1 ರಿಂದ ನೌಕರರು ಮತ್ತು ಪಿಂಚಣಿದಾರರಿಗೆ ಬಾಕಿ ಇರುವ ಮೂರು ಕಂತುಗಳ ತುಟ್ಟಿಭತ್ಯೆ ಭತ್ಯೆ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ತುಟ್ಟಿಭತ್ಯೆಯ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲಿದ್ದಾರೆ, ಬಾಕಿ ಇರುವ ಎಲ್ಲಾ ಮೂರು ಕಂತುಗಳನ್ನು ಸಿಗಲಿವೆ ಎಂದು ಹೇಳಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಂದು ಬಾಕಿ ಇರುವ ಡಿಆರ್ ನ ಮೂರು ಕಂತುಗಳನ್ನು ಸ್ಥಗಿತಗೊಳಿಸಲಾಯಿತು. ಜುಲೈ, 2021 ರಿಂದ ಬಾಕಿ ಇರುವ ಮೂರು ಕಂತುಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

error: Content is protected !!