ಕೇಂದ್ರ-ರಾಜ್ಯ ಸರಕಾರ ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲ: ನಿತೀಶ್ ಮುಲ್ಕ ರೆಡ್ಡಿ .! - BC Suddi
ಕೇಂದ್ರ-ರಾಜ್ಯ ಸರಕಾರ ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲ: ನಿತೀಶ್ ಮುಲ್ಕ ರೆಡ್ಡಿ .!

ಕೇಂದ್ರ-ರಾಜ್ಯ ಸರಕಾರ ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲ: ನಿತೀಶ್ ಮುಲ್ಕ ರೆಡ್ಡಿ .!

ಚಿತ್ರದುರ್ಗ: ಕೊರೊನ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು , ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ  ಜಂಟಿ ಕಾರ್ಯದರ್ಶಿ ಕೆಪಿಸಿಸಿ  ಐಟಿ ವಿಭಾಗ ನಿತೀಶ್ ಮುಲ್ಕ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಕೊರೋನಾ ಎರಡನೇ ಅಲೆ ಭಯಬೀತರನ್ನಾಗಿಸಿದೆ , ಈ  ಬಾರಿಯ ಕೊರೊನ ಸೋಂಕಿತರಲ್ಲಿ  ಬಹುತೇಕರು ಉಸಿರಾಟದ ತೊಂದರೆ ಇಂದ ಬಳಲುತ್ತಿದ್ದಾರೆ ನಮ್ಮ ಜಿಲ್ಲೆಯಲ್ಲಿ ಸದ್ಯ  ಹಿಡಿತದಲ್ಲಿರುವ ಸೋಂಕನ್ನು ಹರಡದಂತೆ ಜಿಲ್ಲಾಡಳಿತ ಶಿಸ್ತಿನ ಕ್ರಮ ಕೈಗೊಳ್ಳಬೇಕು , ಮುಂಜಾಗ್ರತೆಯ ಕ್ರಮವಾಗಿ ಆಕ್ಸಿಜೆನ್ ಸಿಲಿಂಡರ್ಗಳನ್ನು ಶೇಖರಿಸಿಟ್ಟು ಕೊಳ್ಳಬೇಕಾಗಿದೆ . ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.