ಉತ್ತರ ಪ್ರದೇಶ: ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದ ವರನೊಬ್ಬ ವಧುವಿಗೆ ಹೂಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

ವರ ಕಂಠಪೂರ್ತಿ ಕುಡಿದು ಮಂಟಪಕ್ಕೆ ಬಂದಿದ್ದು, ಮಂಟಪದಲ್ಲಿ ತೂರಾಡುತ್ತಿದ್ದ ಆತನನ್ನು ವ್ಯಕ್ತಿಯೊಬ್ಬ ಹಿಂದಿನಿಂದ ಹಿಡಿದುಕೊಂಡಿದ್ದ. ಈ ಪರಿಸ್ಥಿತಿಯಲ್ಲೇ ಮದುವೆಯ ಶಾಸ್ತ್ರಗಳು ಅಲ್ಲಿ ನಡೆದಿವೆ. ಈ ವೇಳೆ ವಧು ವರನ ಕುತ್ತಿಗೆಗೆ ಹಾರ ಹಾಕಿದ್ದಾಳೆ. ಬಳಿಕ ವರನಲ್ಲಿ ವಧುವಿನ ಕುತ್ತಿಗೆಗೆ ಹಾರ ಹಾಕುವಂತೆ ಹಿರಿಯರು ಕೇಳಿಕೊಂಡಿದ್ದಾರೆ. ಆಗ ವರ ವಧುವಿನ ಬದಲಾಗಿ ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿದ್ದಾನೆ. ಇದರಿಂದ ಕೋಪಗೊಂಡ ಅತ್ತಿಗೆ ಎರಡು ಬಾರಿ ವರನ ಕಪಾಳಕ್ಕೆ ಬಾರಿಸಿದ್ದಾಳೆ. ಈ ವೇಳೆ ವಧು ಅತ್ತಿಗೆಯನ್ನು ಸಮಾಧಾನ ಪಡಿಸಲು ಮುಂದಾಗಿದ್ದಾಳೆ. ಬಳಿಕ ವರ ವಧುವಿನ ಅತ್ತಿಗೆಯ ಕುತ್ತಿಗೆಯಿಂದ ಹಾರ ತೆಗೆದು ವಧುವಿನ ಕುತ್ತಿಗೆಗೆ ಹಾಕಿದ್ದಾನೆ. ವಧುವಿನ ಬದಲಾಗಿ ಕುಡಿದ ವರ ವಧುವಿನ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕುತ್ತಿರುವ ವೀಡಿಯೋ ಸದ್ಯ ವೈರಲ್ ಆಗಿದೆ.