ಚೆನೈ: ‘ಕಾಸ್ಟಿಂಗ್ ಕೌಚ್’ ಒಪ್ಪಿಕೊಂಡ ಫೇಮಸ್ ನಟಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತದೆ ಎಂಬ ಕೂಗು ಆಗಾಗ ಕೇಳಿಬರುತ್ತದೆ. ಬಹುಭಾಷಾ ನಟಿ ಕೀರ್ತಿ ಸುರೇಶ್ ಸಹ ಕಾಸ್ಟಿಂಗ್ ಕೌಚ್ ಇರುವುದನ್ನು ಒಪ್ಪಿಕೊಂಡಿದ್ದಾರೆ.
ನನ್ನ ಅನೇಕ ಸಹ-ನಟರು ತಮ್ಮ ಕಾಸ್ಟಿಂಗ್ ಕೌಚ್ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ನನಗೆ ಅದರ ಅನುಭವ ಆಗಿಲ್ಲ. ನನ್ನ ವೃತ್ತಿಜೀವನದಲ್ಲಿ ತುಂಬಾ ಸಭ್ಯ ಮತ್ತು ನೇರವಾಗಿರುವ ಕಾರಣಕ್ಕೆ ಯಾರೂ ಅಂತಹ ಉದ್ದೇಶದಲ್ಲಿ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.