ಕಾಶ್ಮೀರ: ಕಾಶ್ಮೀರವನ್ನು ಉಳಿಸಿಕೊಳ್ಳಬೇಕಾದರೆ 370ನೇ ವಿಧಿಯನ್ನು ಪುನಃಸ್ಥಾಪಿಸಬೇಕು ಮತ್ತು ಕಣಿವೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಜನರು ಒಗ್ಗಟ್ಟಾಗಿ ನಿಲ್ಲಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರ ಗುರುತು ಮತ್ತು ಗೌರವವನ್ನು ಕಾಪಾಡುವ ತಮ್ಮ ಹೋರಾಟವನ್ನು ಬಲಪಡಿಸಬೇಕು” ಎಂದಿದ್ದಾರೆ. ಇನ್ನು ಪೊಲೀಸರು ಪಿಡಿಪಿ ಪಕ್ಷದ ಇಬ್ಬರು ನಾಯಕರುಗಳನ್ನುಬಂಧಿಸಿದ್ದು, ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿದ್ದರು.

ಕೇಂದ್ರ ಸರ್ಕಾರವೂ ಮೊದಲಿನಿಂದಲೂ ಸುಳ್ಳನೇ ಹೇಳುತ್ತಾ ಬಂದಿದ್ದು, ತಾವು ಮಾಡಿದ ತಪ್ಪಿನ, ಕ್ರಿಯೆಯ ಜವಾಬ್ದಾರಿಯನ್ನು ಹೊರಲು ಬಯಸಲ್ಲ, ಅದರಿಂದಾಗಿ ಈ ಕೇಂದ್ರ ಸರ್ಕಾರವು ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧವಾಗಿ ಮಾತನಾಡುವವರಿಗೆ ಅನ್ಯಾಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.