ಬೆಂಗಳೂರು: ಸ್ಯಾಂಡಲ್‌‌ವುಡ್‌ನ ಕರಿಯ, ಗಣಪ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದ ನಿರ್ಮಾಪಕ ಆನೇಕಲ್ ಬಾಲರಾಜ್ (58) ಇಂದು ಮೃತಪಟ್ಟಿದ್ದಾರೆ.

ಬಾಲರಾಜ್ ಅವರು ಬೆಂಗಳೂರಿನ ಜೆ.ಪಿ.ನಗರದ ತಮ್ಮ ನಿವಾಸದ ಬಳಿ ವಾಕಿಂಗ್‌ಗೆ ತೆರಳಿದ್ದಾಗ ಅಪಘಾತ ಸಂಭವಿಸಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆಜಿಎಫ್ -3 ಅಭಿಮಾನಿಗಳಿಗೆ ಶಾಕ್: ಸ್ಪಷ್ಟನೆ ನೀಡಿದ ನಿರ್ಮಾಪಕ ವಿಜಯ ಕಿರಗಂದೂರು!

ಪ್ರೇಮ್ ನಿರ್ದೇಶನದ ಕರಿಯ ಸಿನಿಮಾದ ನಿರ್ಮಾಣ ಮಾಡಿದ್ದ ಬಾಲರಾಜ್ ನಂತರ ತಮ್ಮ ಪುತ್ರ ಸಂತು ಬಾಲರಾಜ್ ರನ್ನು ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿಸಿದ್ದರು.