ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಕೆ, ಸ್ಪರ್ಧಾಳುಗಳಲ್ಲಿ ನಡುಕು - BC Suddi
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಕೆ, ಸ್ಪರ್ಧಾಳುಗಳಲ್ಲಿ ನಡುಕು

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಕೆ, ಸ್ಪರ್ಧಾಳುಗಳಲ್ಲಿ ನಡುಕು

ಚಿತ್ರದುರ್ಗ:  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಲ್ಲಿ ಹತ್ತಾರು ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಮುಂದಾದಾಗ ಅವರಲ್ಲಿ ಅರ್ಹರನ್ನು ಹುಡುಕುವ ಕಾರ್ಯ ನಡೆಸಿ ಬಹುತೇಕ ಕನ್ನಡ ಮನಸ್ಸುಗಳು ತೀವ್ರ ಸಂಕಷ್ಟಕ್ಕೆಸಿಲುಕಿದ್ದವು.!

ಇದ್ದಿದ್ದರಲ್ಲಿಯೇ ಚಳ್ಳಕೆರೆ ತಾಲೂಕು ಕೊರ‌್ಲಕುಂಟೆ ಗ್ರಾಮದಲ್ಲಿ ಕನ್ನಡ ಭವನ ನಿರ್ಮಿಸಿ, ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ರಂಗಮಂದಿರಕ್ಕೆ ತರಾಸು ಹೆಸರು ನಾಮಕರಣಕ್ಕೆ ಒತ್ತಾಯಿಸಿ ಅದರಲ್ಲಿ ಯಶಸ್ವಿಯಾಗಿದ್ದ ಜೆ.ತಿಪ್ಪೇಸ್ವಾಮಿ (ಕೊರ್ಲಕುಂಟೆ).

ಇನ್ನೂ ವಿಜ್ಞಾನ ಕ್ಷೇತ್ರದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಬಂಧ ಮಂಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಗಮನಸೆಳೆದಿದ್ದ ನಾಯಕನಹಟ್ಟಿ ಗ್ರಾಮದ ಶಿವಸ್ವಾಮಿ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಬಹುತೇಕ ಕಸಾಪ ಸದಸ್ಯರು ನಿರ್ಧರಿಸಿದ್ದರು.

ಆದರೆ ಇನ್ನೂ ಜಿಲ್ಲಾ ಕೇಂದ್ರದಲ್ಲಿ ವಾಸವಾಗಿರುವ ಹಾಲಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಆರ್.ಶೇಷಣ್ಣಕುಮಾರ್,  ಚಿಕ್ಕಪ್ಪನಹಳ್ಳಿ ಷಣ್ಮುಖ ನಾಮಪತ್ರ ಸಲ್ಲಿಸಿದ್ರು.

ಈ ಬಾರಿ ಗಡಿನಾಡು ಕನ್ನಡಿಗರಾದ ಕೆ.ಎಂ.ಶಿವಸ್ವಾಮಿ ಅಥವಾ ಕೊರ್ಲಕುಂಟೆ ಗ್ರಾಮದ ಜೆ.ತಿಪ್ಪೇಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಲಿ ಎಂಬ ಆಶಯವನ್ನು ಬಹುತೇಕ ಸದಸ್ಯರು ವ್ಯಕ್ತಪಡಿಸುತ್ತಿದ್ದರು.

ಆರ್.ಶೇಷಣ್ಣಕುಮಾರ್ ಈ ಹಿಂದೆ ಸ್ಪರ್ಧಿಸಿ ಒಮ್ಮೆ ಸೋತಿದ್ದು, ಅವರ ಪರವೂ ಕೆಲ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ಅನುಕಂಪ ಕೈಹಿಡಿಯಲಿದೆ ಎಂದು ಭಾವಿಸಿದ್ದರು. ಅಭಿಪ್ರಾಯ ದಟ್ಟವಾಗಿದ್ದ ಸಂದರ್ಭದಲ್ಲಿಯೇ ಕನ್ನಡ ಮನಸ್ಸುಗಳ, ಸಾಹಿತಿಗಳ, ಕಸಾಪ ಸದಸ್ಯರು ನಿರಂತರ ಒತ್ತಡಕ್ಕೆ ಮಣಿದು ಕೊನೆಗಳಿಗೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಸಿರುವುದು ಗೆಲುವಿನ ಹಾದಿ ಸುಗಮ ಎಂದು ಭಾವಿಸಿದ್ದ ಕೆ.ಎಂ.ಶಿವಸ್ವಾಮಿ, ಕೊರ್ಲಕುಂಟೆ ತಿಪ್ಪೇಸ್ವಾಮಿ ಪರ ಕಾರ್ಯನಿರ್ವಹಿಸುತ್ತಿದ್ದ ಪರಿಷತ್ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ.

ಈ ಬಾರಿ ಚುನಾವಣೆಯಲ್ಲಿ ಗಡಿನಾಡು ಕನ್ನಡಿಗರಿಗೆ ಕಸಾಪ ಅಧ್ಯಕ್ಷ ಸ್ಥಾನ ಎಂಬ ಘೋಷಣೆ ಎಲ್ಲೆಡೆ ಜೋರಾಗಿಯೇ ಇತ್ತು. ಇದಕ್ಕೆ ಕಾರಣ ಜಿಲ್ಲಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿದ ಡಾ.ದೊಡ್ಡಮಲ್ಲಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಹುತೇಕರನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪ, ಇನ್ನೂ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರು ಪತ್ರಿಕೆಗೆ ವರದಿ ಬರೆಯುವ ಸಂದರ್ಭ ವೈಯಕ್ತಿಕ ದ್ವೇಷ ಸೇರಿಸುವ ನಡೆ, ಅನಗತ್ಯವಾಗಿ ಕೆಲವರ ವಿರುದ್ಧ ದಾಖಲೆ ರಹಿತ ಆರೋಪ ಸುದ್ದಿಗಳನ್ನು ಬರೆದಿದ್ದು, ಒಂದು ರೀತಿ ವಾರಪತ್ರಿಕೆ ರೀತಿ ಅತೀ ರಂಜಿತ ಸುದ್ದಿ ಬರೆದ ಕಾರಣಕ್ಕೆ ಬಹುತೇಕರ ವಿರೋಧ

ಕಟ್ಟಿಕೊಂಡಿದ್ದಾರೆ.

ಇನ್ನೂ ಆರ್.ಶೇಷಣ್ಣಕುಮಾರ್ ರಂಗಭೂಮಿ, ಸಾಂಸ್ಕೃತಿಕ, ಹೋರಾಟ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ ನಿಷ್ಠೂರವಾದಿ ಮಾತು ಜನರಿಗೆ ಅಷ್ಟಾಗಿ ರುಚಿಸಿಲ್ಲ. ಈ ಕಾರಣಕ್ಕೆ ಬಹುತೇಕ ಮಂಗಳವಾರದವರೆಗೂ ಕೆ.ಎಂ.ಶಿವಸ್ವಾಮಿ ವರ್ಸಸ್ ಕೊರ್ಲಕುಂಟೆ ತಿಪ್ಪೇಸ್ವಾಮಿ ಎಂಬಂತಿದ್ದ ವಾತಾವರಣ ಬುಧವಾರ ಮಧ್ಯಾಹ್ನ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಕೆ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇನ್ನೂ ಒಂದು ತಿಂಗಳ ಕಾಲ ಪ್ರಚಾರಕ್ಕೆ ಸಮಯ ಇರುವ ಕಾರಣ ಈ ಸ್ಪರ್ಧೆ ವಿವಿಧ ಸ್ವರೂಪ ಪಡೆದುಕೊಂಡರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯ ಮುಂದಾಳುತ್ವ ವಹಿಸಬೇಕಾಗಿದ್ದ ಸಾಹಿತಿಗಳು, ಕವಿಗಳು, ಕನ್ನಡ ಮನಸ್ಸುಗಳು ಈ

ಬಾರಿ ಜಿದ್ದಾಜಿದ್ದಿಗೆ ಇಳಿದಿರುವುದು ಗೆಲುವು ಆರ್.ಮಲ್ಲಿಕಾರ್ಜುನಯ್ಯ, ಕೆ.ಎಂ.ಶಿವಸ್ವಾಮಿ, ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಮೂವರಲ್ಲಿ ಯಾರ ಮುಡಿಗೇ ಏರಲಿದೆ ಎಂಬ ಕುತೂಹಲ ತೀವ್ರಗೊಂಡಿದೆ.

error: Content is protected !!