ಬೆಂಗಳೂರು: ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸರ್ಕಾರಿ ನೌಕರರಿಗೆ ಷರತ್ತುಬದ್ಧ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಕರ್ನಾಟಕ ಸಿವಿಲ್ ಸೇವಾ ನಿಯಮ ಜಾರಿಗೆ ಬಂದ 2012ರ ಮಾರ್ಚ್ 22ರಿಂದ 2021ರ ಏಪ್ರಿಲ್ 17ರೊಳಗೆ ಉತ್ತೀರ್ಣರಾದವರು ಮಾತ್ರ ಈ ಪ್ರೋತ್ಸಾಹ ಧನಕ್ಕೆ ಅರ್ಹರು ಎಂದು ಸರ್ಕಾರ ಹೇಳಿದೆ.
ಸರ್ಕಾರದಿಂದ ಅನುಮೋದಿತ ಏಜೆನ್ಸಿ ನೀಡಿರುವ ಡಿಜಿಟಲ್ ಸಹಿ ಹೊಂದಿರುವ ಪ್ರಮಾಣ ಪತ್ರವನ್ನು ಆಧರಿಸಿ ಪ್ರೋತ್ಸಾಹ ಧನ ಮಂಜೂರು ಮಾಡುವಂತೆ DPAR ತಿಳಿಸಿದೆ.