ಒಂದು ದಿನವೂ ರಜೆ ಮಾಡದೆ ಸತತ 27 ವರ್ಷ ಕೆಲಸ ಮಾಡಿದ್ದ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂಪಾಯಿಗಳ ದೇಣಿಗೆ ಸಾರ್ವಜನಿಕರು ‌ನೀಡಿದ್ದಾರೆ‌.

ಕೆವಿನ್ ಫೋರ್ಡ್ ಎಂಬಾತ ಬರ್ಗರ್ ಕಿಂಗ್ ಕಂಪನಿಯಲ್ಲಿ ಸತತ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಒಂದು ದಿನವೂ ರಜೆ‌ ಮಾಡಿಲ್ಲ.

ಕೆವಿನ್ ಮಗಳು ಸೆರಿನಾ ತನ್ನ ತಂದೆಯ ಪರಿಶ್ರಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದಳು. ಅದರಂತೆ ಗೋಫಂಡ್ ಮಿ ಎಂಬ ಸಂಸ್ಥೆಯ ವೆಬ್ ಸೈಟ್ ನಲ್ಲಿ ಈ ವಿಚಾರವನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಳು. ಜೊತೆಗೆ ಅಪ್ಪನಿಗೆ ದೇಣಿಗೆ ನೀಡುವಂತೆ ಕೋರಿದ್ದರು.

ಇದಕ್ಕೆ ಸ್ಪಂದಿಸಿದ ಸಾರ್ವಜನಿಕರು ಬರೊಬ್ಬರಿ 1,50,000 ಡಾಲರ್ ಅಂದರೆ ಬರೋಬ್ಬರಿ 1,17,44,100 ರೂಪಾಯಿಗಳ ದೇಣಿಗೆ ನೀಡಿದ್ದಾರೆ.