ಎಸ್ ಬಿಐ ಬ್ಯಾಂಕಿನಿಂದ ಗೃಹ ಸಾಲಗಾರರಿಗೆ ಬಡ್ಡಿ ದರ ಹೆಚ್ಚಳ.! - BC Suddi
ಎಸ್ ಬಿಐ ಬ್ಯಾಂಕಿನಿಂದ ಗೃಹ ಸಾಲಗಾರರಿಗೆ ಬಡ್ಡಿ ದರ ಹೆಚ್ಚಳ.!

ಎಸ್ ಬಿಐ ಬ್ಯಾಂಕಿನಿಂದ ಗೃಹ ಸಾಲಗಾರರಿಗೆ ಬಡ್ಡಿ ದರ ಹೆಚ್ಚಳ.!

ನವದೆಹಲಿ : ಏಪ್ರಿಲ್ 1 ರಿಂದಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್ ಬಿಐ ) ಗೃಹ ಸಾಲದ ಮೇಲಿನ ಬಡ್ಡಿಯನ್ನು ಶೇ. 0.25 ರಷ್ಟು ಏರಿಕೆ ಮಾಡಿದ್ದು, ಹಾಲಿ ಶೇ. 6.70 ರಿಂದ ಶೇ.6.95 ಕ್ಕೆ ಹೆಚ್ಚಳ ಮಾಡಿದೆ.

ಬ್ಯಾಂಕಿನ ಇಬಿಎಲ್‌ಆರ್ ಪ್ರಸ್ತುತ ಶೇಕಡಾ 6.65ರಷ್ಟಿದೆ. ಗೃಹ ಸಾಲವು ಶೇಕಡಾ 7 ರಷ್ಟಿದೆ. ಆದ್ರೆ ಮಹಿಳೆಯರಿಗೆ ಶೇಕಡಾ 0.05ರಷ್ಟು ರಿಯಾಯಿತಿಯಲ್ಲಿ ಸಾಲ ಸಿಗುತ್ತದೆ. ಅಂದ್ರೆ ಗೃಹ ಸಾಲದ ಬಡ್ಡಿ ದರ ಶೇಕಡಾ 6.95ರಷ್ಟಾಗುತ್ತದೆ. ಈ ಅವಧಿಯಲ್ಲಿ ಬ್ಯಾಂಕ್ 75 ಲಕ್ಷದವರೆಗಿನ ಸಾಲಗಳಿಗೆ ಶೇ. 6.70 ರಷ್ಟು ಮತ್ತು 75 ಲಕ್ಷದಿಂದ 5 ಕೋಟಿ ವರೆಗಿನ ಸಾಲಗಳಿಗೆ ಶೇ. 6.75 ರ ಬಡ್ಡಿದರದಲ್ಲಿ ಸಾಲ ನೀಡುತ್ತದೆ.

ಗೃಹ ಸಾಲಗಳ ಮೇಲೆ ಕ್ರೋಡೀಕೃತ ಸಂಸ್ಕರಣಾ ಶುಲ್ಕವನ್ನು ಸಹ ವಿಧಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಇದು ಸಾಲದ ಮೊತ್ತದ 0.40 ಪ್ರತಿಶತ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕನಿಷ್ಠ 10,000 ಮತ್ತು ಗರಿಷ್ಠ 30,000 ರೂ. ಪ್ಲಸ್ ಜಿಎಸ್ ಟಿಗೆ ಒಳಪಟ್ಟಿರುತ್ತದೆ.

ಒಂದು ವೇಳೆ, ಟಿಐಆರ್ ಅಗತ್ಯವಿದ್ದಲ್ಲಿ, ಬ್ಯಾಂಕಿನ ಸಾಮಾನ್ಯ ಶುಲ್ಕಗಳು ಅನ್ವಯವಾಗಲಿದೆ. ಹಬ್ಬದ ಋತುವಿನ ಕಾರಣ ಬ್ಯಾಂಕ್ ಈ ಹಿಂದೆ ಮಾರ್ಚ್ 31ರವರೆಗೆ ಗೃಹ ಸಾಲ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿತ್ತು.

error: Content is protected !!