ಎಸ್ಪಿ ರಾಧಿಕಾ ಅವರಿಂದ ಕೊರೋನಾ ಸೋಂಕು ಬಗ್ಗೆ ತಿಳುವಳಿಕೆ..! - BC Suddi
ಎಸ್ಪಿ ರಾಧಿಕಾ ಅವರಿಂದ ಕೊರೋನಾ ಸೋಂಕು ಬಗ್ಗೆ ತಿಳುವಳಿಕೆ..!

ಎಸ್ಪಿ ರಾಧಿಕಾ ಅವರಿಂದ ಕೊರೋನಾ ಸೋಂಕು ಬಗ್ಗೆ ತಿಳುವಳಿಕೆ..!

 

 

ಚಿತ್ರದುರ್ಗ : ಜಿಲ್ಲಾ ಪೊಲೀಸ್ ವತಿಯಿಂದ ರಾಜ್ಯದ್ಯಂತ ಕರೋನಾ  ಸೋಂಕು ಹೆಚ್ಚಾಗಿರುವ ಕಾರಣ ಅದನ್ನು ತಡೆಗಟ್ಟುವದು ಹಾಗೂ ಜನರಲ್ಲಿ ಜಾಗೃತಿ ಮೂಡಿಸ ವ ಸಲುವಾಗಿ ಜಿಲ್ಲಾ ಎಸ್ಪಿ ರಾಧಿಕಾ ಮೇಡಂ ರವರು ಚಿತ್ರದುರ್ಗ ನಗರಾದ್ಯಂತ ಅಂಗಡಿ ಮತ್ತು ರಸ್ತೆ ಬದಿಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಲ್ಲಿ ಈ ಸೋಂಕಿನ ಬಗ್ಗೆ ತಿಳುವಳಿಕೆ ನೀಡಿದರು.

ಪ್ರತಿಯೊಬ್ಬ ಸಾರ್ವಜನಿಕರು ಮಾಸ್ಕನ್ನು ಕಡ್ಡಾಯವಾಗಿ ದರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಇದನ್ನು ಚಾಚೂ ತಪ್ಪದೇ ಪ್ರತಿಯೊಬ್ಬರೂ ನಿಯಮವನ್ನು ಪಾಲಿಸಬೇಕು ಈ ನಿಯಮಕ್ಕೆ ವಿರುದ್ಧವಾಗಿ ನಡೆದ ಕೊಂಡವರ ಬಗ್ಗೆ ನಿಯಮಾನುಸಾರವಾಗಿ ಕಾನೂನಿನ ಕ್ರಮವನ್ನು ಜರುಗಿಸಲಾಗುವುದು ಎಂದು ತಿಳಿಸಿದರು.

ಈ ಜಾತ  ಎಂ ಜಿ ಸರ್ಕಲ್ ನಿಂದ ಪ್ರಾರಂಭವಾಗಿ ಸರ್ಕಾರಿ ಬಸ್ ನಿಲ್ದಾಣ ,ಎಪಿಎಂಸಿ ಮಾರ್ಕೆಟ್ ದಾವಣಗೆರೆ ರೋಡ್ ಮುಖಾಂತರ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಮುಖ್ಯರಸ್ತೆ ಮುಖಾಂತರವಾಗಿ  ಡಿಸಿ ಸರ್ಕಲ್  ಜೆಸಿಆರ್  ಎಕ್ಸ್ಪ್ರೆಷನ್ ಮುಖಾಂತರ ರೂರಲ್ ಠಾಣೆಗೆ ಬಂದು ಮುಕ್ತಾಯಗೊಳಿಸಿದರು. ಈ ಕಾರ್ಯಕ್ರಮದಲ್ಲಿ  ಇನ್ಸ್ಪೆಕ್ಟರ್ ಗಳಾದ ನಹಿ಼ಂ, ರಮೇಶ್ರಾವ್, ರಮಕಾಂತ್, ಸೋಮಶೇಖರ್ ಮತ್ತು ರ್ರುದ್ರೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.