ಉಚಿತವಾಗಿ ಅಕ್ಕಿ ಕೊಡುವುದು ಸರಿಯಲ್ಲ: ವಿಜಯ ಸಂಕೇಶ್ವರ್ - BC Suddi
ಉಚಿತವಾಗಿ ಅಕ್ಕಿ ಕೊಡುವುದು ಸರಿಯಲ್ಲ: ವಿಜಯ ಸಂಕೇಶ್ವರ್

ಉಚಿತವಾಗಿ ಅಕ್ಕಿ ಕೊಡುವುದು ಸರಿಯಲ್ಲ: ವಿಜಯ ಸಂಕೇಶ್ವರ್

 

ಹುಬ್ಬಳ್ಳಿ: ಜನರಿಗೆ ಉಚಿತವಾಗಿ ಅಕ್ಕಿ ಕೊಡುವುದು ಸರಿಯಲ್ಲ ಎಂದು ಉದ್ಯಮಿ ವಿಜಯ ಸಂಕೇಶ್ವರ್ ಹೇಳಿದ್ದಾರೆ. ಜನರಿಗೆ ಉಚಿತವಾಗಿ ಅಕ್ಕಿ ಕೊಟ್ಟರೆ ಅವರು ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿಯುತ್ತಾರೆ. ಇದರಿಂದ ಕೈಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ.ಕಳೆದ ಸಲ ಲಾಕ್ಡೌನ್ ಆದಾಗ ಜನರಿಗೆ ಮೂರು ತಿಂಗಳು ಉಚಿತವಾಗಿ ಅಕ್ಕಿ ವಿತರಿಸಿತ್ತು.ಈಗ ಮತ್ತೆ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಉತ್ಪಾದನಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಜನರಿಗೆ ಮಾಡಲು ತುಂಬಾ ಕೆಲಸಗಳಿವೆ.ಆದರೆ ಉಚಿತ ಅಕ್ಕಿ ಕೊಡುವುದರಿಂದ ಅವರು ಕೆಲಸದ ಸ್ಥಳದಿಂದ ಮನೆಗೆ ಹೋಗುತ್ತಾರೆ.ನಮ್ಮಂತಹ ದೇಶದಲ್ಲಿ ಇಂತಹ ಸವಲತ್ತುಗಳನ್ನು ಕೊಡುವುದು ಸರಿಯಲ್ಲ ಎಂದಿದ್ದಾರೆ.!