ಈ ಹಣ್ಣುಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಯಾವ ಹಣ್ಣುಗಳು ತಿನ್ನ ಬೇಕು ಪಟ್ಟಿ ಇಲ್ಲಿದೆ.! - BC Suddi
ಈ ಹಣ್ಣುಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಯಾವ ಹಣ್ಣುಗಳು ತಿನ್ನ ಬೇಕು ಪಟ್ಟಿ ಇಲ್ಲಿದೆ.!

ಈ ಹಣ್ಣುಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಯಾವ ಹಣ್ಣುಗಳು ತಿನ್ನ ಬೇಕು ಪಟ್ಟಿ ಇಲ್ಲಿದೆ.!

ನವದೆಹಲಿ: ಸೋಂಕಿತ ವ್ಯಕ್ತಿ ಸ್ನಾಯು ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು mygovindia ಟ್ವಿಟರ್​ ಖಾತೆಯಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕೆಲ ನೈಸರ್ಗಿಕ ಆಹಾರ ಪದಾರ್ಥಗಳನ್ನ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ದೇಹಕ್ಕೆ ಸಾಕಷ್ಟು ಪೋಷಕಾಂಶ ಹಾಗೂ ಜೀವಸತ್ವದ ಅವಶ್ಯಕತೆ ಇರೋದ್ರಿಂದ ದಿನಕ್ಕೆ 5 ಬಾರಿ ಹಣ್ಣು ಹಾಗೂ ತರಕಾರಿಗಳನ್ನ ಸೇವಿಸುವುದು ಉತ್ತಮ. 70 ಪ್ರತಿಶತ ಕೋಕೊ ಅಂಶವನ್ನ ಹೊಂದಿರುವ ಸಣ್ಣ ಪ್ರಮಾಣದ ಡಾರ್ಕ್​ ಚಾಕೋಲೇಟ್​ ಸೇವನೆಯಿಂದ ಆತಂಕ ದೂರಾಗಲಿದೆ.

ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ದಿನಕ್ಕೆ ಒಂದು ಬಾರಿ ಅರಿಶಿಣದ ಹಾಲನ್ನ ಸೇವಿಸಿ. ಸ್ವಲ್ಪ ಸಮಯದ ಅಂತರದಲ್ಲಿ ಮೃದು ಆಹಾರವನ್ನ ಸೇವಿಸುತ್ತಲೇ ಇರಿ. ಈ ಆಹಾರಕ್ಕೆ ಆಮ್​​ಚೂರ್​​ನ್ನು ಹಾಕಿಕೊಂಡು ತಿನ್ನಿ. ರಾಗಿ, ಓಟ್ಸ್​ನಂತಹ ಆಹಾರ ಧಾನ್ಯಗಳನ್ನ ಸೇವಿಸಿ.

ಪ್ರೋಟಿನ್​​ ಅಂಶಗಳು ಅಗಾಧ ಪ್ರಮಾಣದಲ್ಲಿರುವ ಚಿಕನ್​, ಮೀನು, ಮೊಟ್ಟೆ, ಪನ್ನೀರ್​, ಸೋಯಾದಂತಹ ಆಹಾರವನ್ನ ಸೇವಿಸಿ. ವಾಲ್ನಟ್​, ಆಲ್ಮೊಂಡ್​, ಆಲಿವ್​ ಎಣ್ಣೆ ಹಾಗೂ ಮಸ್ಟರ್ಡ್​ ಎಣ್ಣೆಯನ್ನ ಸೇವಿಸಿ.