ಶ್ರೀಹರಿಕೋಟಾ: ಇಸ್ರೋ ಈಗ ಮತ್ತೊಂದು ರಾಕೆಟ್ ಉಡಾವಣೆ ಮಾಡಲಿದೆ. ಜೂನ್-30 ರಂದು ಸಂಜೆ 6 ಗಂಟೆ ಹೊತ್ತಿಗೆ ರಾಕೆಟ್ ಉಡಾವಣೆ ಆಗಲಿದೆ.

ಸಿಂಗಪುರದ ಮೂರು ಉಪಗ್ರಹಗಳನ್ನ ಹೊತ್ತು ಈ ಪಿಎಸ್‌ಎಲ್‌ವಿ-ಸಿ 53 ರಾಕೆಟ್ ಉಡಾವಣೆ ಆಗಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದಲೇ ಈ ರಾಕೆಟ್ ಉಡಾವಣೆ ಆಗುತ್ತಿದೆ.

ಇಸ್ರೋ ಮುಖ್ಯಸ್ಥ ಸೋಮನಾಥ್ ಅಧಿಕಾರ ವಹಿಸಿಕೊಂಡ ಬಳಿಕವೇ 2ನೇ ಪಿಎಸ್‌ಎಲ್‌ವಿ ರಾಕೆಟ್ ಯೋಜನೆ ಇದಾಗಿದೆ.