ಇಂದು ಮೇ-೪ ವಿಶ್ವ ಅಸ್ತಮಾ ದಿನಾಚರಣೆ: ರೋಗ ತಡಗಟ್ಟುವುದು-ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ - BC Suddi
ಇಂದು ಮೇ-೪ ವಿಶ್ವ ಅಸ್ತಮಾ ದಿನಾಚರಣೆ: ರೋಗ ತಡಗಟ್ಟುವುದು-ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಇಂದು ಮೇ-೪ ವಿಶ್ವ ಅಸ್ತಮಾ ದಿನಾಚರಣೆ: ರೋಗ ತಡಗಟ್ಟುವುದು-ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಎದೆಯಲ್ಲಿ ಬಿಗಿತ,ಉಸಿರಾಡಲು ಕಷ್ಟವಾಗುವುದು.ಪದೇ ಪದೇ ಬರುವ ಕೆಮ್ಮು ಒಂದು ರೀತಿಯ ಉಸಿರುಗಟ್ಟಿದಂತೆ ಅನಿಸುವುದು ಇವು ಅಸ್ತಮಾ ಕಾಯಿಲೆಯ ಲಕ್ಷಣವಾಗಿದೆ.ಆರಂಭಿಕ ಹಂತದಲ್ಲಿ ಮಾರಣಾಂತಿಕವಲ್ಲದಿದ್ದರೂ ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಮಾರಕವಾಗುವ ಕಾಯಿಲೆ ಇದಾಗಿದೆ.ಅಸ್ತಮಾವನ್ನು ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದರ ಪರಿಣಾಮಗಳನ್ನು ಮತ್ತು ಲಕ್ಷಣಗಳನ್ನು ಕಡಿಮೆಗೊಳಿಬಹುದು,ಕೆಲವರಿಗೆ ಬಾಲ್ಯದಲ್ಲಿ ಕಾಡುವ ಅಸ್ತಮಾ ವಯಸ್ಕರಾಗುವ ಈ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಈ ಕಾಯಿಲೆ ಲಕ್ಷಣಗಳು ಹೆಚ್ಚಿನ ಅರಿವು ಮೂಡಿಸಲು ರೋಗ ನಿವಾರಣೆಗೆ ಇರುವ ಔಷಧ ಚಿಕಿತ್ಸೆ ಪದ್ದತಿಗಳ ಕುರಿತು ಮಾಹಿತಿ ನೀqವ ಉದ್ಧೇಶದಿಂದ ಪ್ರತಿವರ್ಷ ಮೇ-೪ ರಂದು ವಿಶ್ವ ಅಸ್ತಮಾ ದಿನಾಚರಣೆಯನ್ನು ಆಚರಿಸಲಾಗುವುದು.ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆ ಹೋಗಲಾಡಿಸಿ ರೋಗದ ಜಾಗೃತಿ ಮೂಡಿಸಿ,ರೋಗಿಗಳಿಗೆ ಆತ್ಮಸ್ಥರ್ಯವನ್ನು ನೀಡುವ ಸದುದ್ದೇಶ ಈ ಆಚರಣೆ ಹಿನ್ನಲೆಯಾಗಿದೆ.ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ಧೀರ್ಘಕಾಲಿಕ ರೋಗವಾಗಿದ್ದು,ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆ ಉಂಟು ಮಾಡುತ್ತದೆ.

ಅಸ್ತಮಾ ರೋಗದ ಲಕ್ಷಣಗಳು:-

೧,ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದು ಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.

೨,ಎದೆ ಬಿಗಿಹಿಡಿತ,ಉಸಿರು ಕಿರಿದಾಗುವುದು,ಉಸಿರಾಡಲು ಕಷ್ಟವಾಗುವುದು.

೩,ವಿಪರೀತ ಧೀಘಕಾಲಿಕ ಕೆಮ್ಮು.

೪,ವಿಪರೀತ ಮತ್ತು ನಿರಂತರ ಕೆಮ್ಮುನಿಂದಾಗಿ ನಿದ್ರಾಹೀನತೆ,ಆಶಕ್ತಿ ಮತ್ತು ಅಸಹನೆ ನಿರುತ್ಸಾಹ.ಆಟೋಟ ಮತ್ತು ಇತರೆ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.

ಅಸ್ತಮಾ ತಡೆಗಟ್ಟುವುದು ಹೇಗೆ?

ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವು ಪ್ರಕ್ರಿಯೆಎ ಹೆಚ್ಚಿನ ಪ್ರಮುಖ್ಯತೆ ನೀಡಬೇಕಾಗುತ್ತದೆ.ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾ ರೋಗಕ್ಕೆ ತುತ್ತಾಗುತ್ತಾರೆ ಎಂಬುದನ್ನು ಅರಿತು ಅಲರ್ಜಿಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಬೇಕು ಉದಾ:ಧೂಳು,ಧೂಮಪಾನದ ಹೊಗೆ,ಅಸ್ಪರೀನ್ ಮುಂತಾದ ನೋವು ನಿವಾರಕ ಔಷಧಿಗಳು,ಸಾಕು ಪ್ರಾಣಿಗಳ ರೋಮ,ಅಲರ್ಜಿಕಾರಕ ಆಹಾರ ಪದರ್ಥಗಳು ಚಾಕುಲೇಟು ಇತ್ಯಾದಿ ಜೀವನ ಶೈಲಿಯ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿ ವಾತಾವತರಣದಲ್ಲಿನ ಅಲರ್ಜಿಕಾರಕ ವಸ್ತುಗಳು ಅಥವಾ ರಾಸಾಯಿನಿಗಳ ಸಂಪರ್ಕಕ್ಕೆ ಬಾರದಂತೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ.

ಪ್ರತಿವರ್ಷವು ವಿಶ್ವ ಅಸ್ತಮಾ ದಿನದಂದು ಧ್ಯೇಯ ವಾಕ್ಯವನ್ನು ಘೋಷಿಸಿ ಜನರಿಗೆ ಜಾಗೃತಿ ಮೂಡಿಸಲಾಗಿತ್ತದೆ ಅದರಂತೆ ೨೦೨೧ ನೇ ವರ್ಷದ ಧ್ಯೇಯ ವಾಕ್ಯ Uಟಿಛಿoveಡಿiಟಿg ಂsಣhmಚಿ ಒisಛಿಟಿಛಿeಠಿಣioಟಿs ಕನ್ನಡ ಭಾಷಾರ್ಥ ಅಸ್ತಮಾ ತಪ್ಪುಕಲ್ಪನರ ಬಹಿರಂಗಪಡಿಸುವುದು ಎಂಬುದಾಗಿದೆ.ಜನರು ಅಸ್ತಮಾ ಕಾಯಿಲೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳುವ ಬದಲು ಜಾಗೃತಿ ವಹಿಸಬೇಕಾಗಿದೆ.

 

-ಎಸ್.ಮರಳಸಿದ್ದೇಶ್ವರ.
ಶಿವಪುರ.ಹೊಳಲ್ಕೆರೆ.
ಮೊ: 9481419314