ಪ್ಲಾಸ್ಟಿಕ್‌ ಸರ್ಜರಿಯಿಂದ ಯುವ ನಟಿ ಚೇತನಾ ರಾಜ್ ಮಿಧನರಾಗಿರುವ ಕುರಿತಾಗಿ ನಟಿ ರಮ್ಯಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಟಿಯರು ಎದುರಿಸುವ ಸವಾಲನ್ನು ಬಿಚ್ಚಿಡುವ ಮೂಲಕ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ಇಂಡಸ್ಟ್ರಿ ನಟಿಯರ ಪಾತ್ರದ ವಿಚಾರವಾಗಿ ಇನ್ನೂ ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಮ್ಯಾ ಆಗ್ರಹಿಸಿದರು. ಸ್ಟಿಕ್ ಸರ್ಜರಿಯಿಂದ ಯುವ ನಟಿ ನಿಧನರಾಗಿರುವ ಸುದ್ದಿ ತಿಳಿಯಿತು.

ನನ್ನ ಕಾಲಿನ ಟ್ಯೂಮರ್ ತೆಗೆಸಿದ ಬಳಿಕ ನಾನು ದಪ್ಪಗಾದೆ. ನಾನು ಈಗ ವೇಟ್ ಲಾಸ್ ಜರ್ನಿಯಲ್ಲಿದ್ದೆ. ಆದರೆ ನನಗೆ ಜೀವ ಕಳೆದುಕೊಂಡ ಈ ನಟಿ ಸಾವಿನ ಬಗ್ಗೆ ಬೇಸರವಾಗುತ್ತಿದೆ. ಪುರುಷನಾದನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ಟೋಪಿ ಹಾಕಿಕೊಳ್ಳಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ ಎಂದು ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.