ನವದೆಹಲಿ: ಆರ್ಥಿಕತೆಯಲ್ಲಿ ನಿರಂತರ ಹಣದುಬ್ಬರದ ನಿಯಂತ್ರಿಸುವ ನಿಟ್ಟಿನಲ್ಲಿ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ಗಳಿಂದ (ಬಿಪಿಎಸ್) 4.40%ಕ್ಕೆ ಹೆಚ್ಚಿಸಲು ಎಂಪಿಸಿ ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಗವರ್ನರ್ ಶಕ್ತಿಕಾಂತ್ ದಾಸ್, ಮೇ 2ರಿಂದ 4ರವರೆಗೆ ಆರ್ ಬಿಐನ ಹಣಕಾಸು ನೀತಿ ಸಮಿತಿ ನಡೆಸಿದ್ದ ಸಭೆಯಲ್ಲಿ ರೆಪೋ ದರ ಏರಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಇನ್ನು ಹೆಚ್ಚುತ್ತಿರುವ ಹಣದುಬ್ಬರ, ರಷ್ಯಾ, ಉಕ್ರೇನ್ ಯುದ್ಧ, ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದು, ಈ ನಿಟ್ಟಿನಲ್ಲಿ ರೆಪೋ ದರ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.